Sundar Pichai- ತಮಿಳು ನಾಡು ಯುವಕ ಗೂಗಲ್ ಮುಖ್ಯಾಧಿಕಾರಿ ಸುಂದರ್ ಪಿಚೈ ದಿನದ ಸಂಬಳ 6 ಕೋಟಿ!
ಸುಂದರ್ ಪಿಚ್ಚೈ ಗೂಗಲ್ ಮತ್ತು ಆಲ್ಫಾಬೆಟ್ ಇಂಕ್ ಸಂಸ್ಥೆಯ ಸಿಇಓ. ಭಾರತೀಯ ಮೂಲದ 48 ವರ್ಷದ ಹರೆಯದ ಸುಂದರ್ ಪಿಚೈ ಪುಟ್ಟ ಮಧ್ಯಮ ಕುಟುಂಬದಲ್ಲಿ ಜನಿಸಿದವರು. ಆದರೆ ಈಗ ಜಗತ್ತಿನ ಪ್ರತಿಷ್ಟಿತ ಸಂಸ್ಥೆ 'ಗೂಗಲ್' ಸಿಇಓ ಹುದ್ದೆ ವರೆಗಿನ ಅವರ ಪ್ರಯಾಣ ಬಲು ರೋಚಕ...
2019 ರ ಅಂಕಿ ಅಂಶಗಳ ಪ್ರಕಾರ ಸುಂದರ್ ಪಿಚ್ಚೆ ಅವರ ಒಂದು ದಿನದ ಗಳಿಕೆ ಬರೋಬ್ಬರಿ ಐದು ಕೋಟಿ ಎಂಬತ್ತೇಳು ಲಕ್ಷ ರೂ. ಮಾತ್ರ. ಇನ್ನು ಇವರ ಮೊಬೈಲ್ ನಲ್ಲಿ ಆಪ್ತರು, ಸ್ನೇಹಿತರು ಸೇರಿದಂತೆ ಯಾರ ಸಂಪರ್ಕ ಸಂಖ್ಯೆ ಸೇವ್ ಆಗಿಲ್ಲ. ಎಲ್ಲಾ ಆಪ್ತರ, ಸಹೋದ್ಯೋಗಿಗಳ ನಂಬರ್ ಅವರ ತಲೆಯಲ್ಲಿ ಸೇವ್ ಆಗಿರುತ್ತದೆ. ಈ ಅಪರೂಪದ, ವಿಶಿಷ್ಟ ರೀತಿಯ ವ್ಯಕ್ತಿ ನಮ್ಮ ದಕ್ಷಿಣ ಭಾರತದವರು ಎಂಬುದು ಹೆಮ್ಮೆಯ ಸಂಗತಿ.
ಜೂನ್ 10 1972 ರಂದು ತಮಿಳುನಾಡಿನ ಮಧುರೈಯಲ್ಲಿ ಸುಂದರ್ ಪಿಚೈ ಜನಿಸುತ್ತಾರೆ. ಲಕ್ಷ್ಮಿ ಮತ್ತು ರಘನಾಥ್ ಪಿಚೈ ಇವರ ತಂದೆ ತಾಯಿಗಳು. ಇವರದು ಕುಗ್ರಾಮದ ಬಡ ಕುಟುಂಬ ಆಗಿದ್ದರು ಕೂಡ ತಾಯಿ ಲಕ್ಷ್ಮಿ ಸ್ಟೇನೋಗ್ರಫಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತದ ನಂತರ ಸ್ವಯಂ ನಿವೃತ್ತಿಗೊಂಡು ಗೃಹಿಣೆಯಾಗಿ ಮನೆಯಲ್ಲಿಯೇ ಉಳಿದರು ಮಕ್ಕಳ ಜವಾಬ್ದಾರಿ ಹೆಚ್ಚಾದ ಕಾರಣ.
ಇನ್ನು ತಂದೆ ರಘುನಾಥ್ ಪಿಚ್ಚೈ ಎಲೆಕ್ಟ್ರಿಕಲ್ ಇಂಜಿನಿಯರ್ ಆದ ಕಾರಣ ಅವರ ತಂದೆಗೆ ಕೆಲವು ಎಲೆಕ್ಟ್ರಿಕ್ ಉಪಕರಣಗಳ ಉತ್ಪಾದನೆ ಘಟಕಗಳಿದ್ದು, ಸಹಜವಾಗಿಯೇ ಸುಂದರ್ ಪಿಚ್ಚೈ ಅವರಿಗೆ ಎಲೆಕ್ಟ್ರಿಕ್ ಉಪಕರಣಗಳ ಕಾರ್ಯವಿಧಾನ ಕೆಲಸದ ಬಗ್ಗೆ ಆಸಕ್ತಿ ಬೆಳೆಯ ತೊಡಗಿತ್ತು.
ಸುಂದರ್ ಅವರಿಗೆ ಬಾಲ್ಯದಿಂದಲು ಆಗಾದ ಬುದ್ದಿ ಶಕ್ತಿಯ ಜೊತೆಗೆ ಜ್ಞಾಪಕ ಶಕ್ತಿ ಆಧಿಕವಾಗಿತ್ತು. ಅದು ಎಷ್ಟರ ಮಟ್ಟಿಗೆ ಅಂದರೆ ತಮ್ಮ ಮನೆಯಲ್ಲಿದ್ದ ಟೆಲಿಫೋನ್ ಡೈರಿಯ ಎಲ್ಲಾ ಕಾಂಟ್ಯಾಕ್ಟ್ ನಂಬರ್ ಅನ್ನು ಬಾಯಿಪಾಠ ಮಾಡಿ ನೆನಪಿನಲ್ಲಿ ಇಟ್ಟುಕೊಂಡಿದ್ದರು.
ಇವರು ವಿಧ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದ ಕಾರಣ ಬಡತನ ಅಡ್ಡಿಯಾಗಿರಲಿಲ್ಲ. ತಮ್ಮ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಮದ್ರಾಸ್ ನಲ್ಲಿ ಪೂರೈಸುತ್ತಾರೆ. ತದ ನಂತರ ಖಾರಕ್ ಪುರದ ಇಂಡಿಯನ್ ಇನ್ಸಿಟ್ಯುಟ್ ನಲ್ಲಿ ಲೋಹ ಶಾಸ್ತ್ರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.
ಅಮೇರಿಕಾದ ಸ್ಟನ್ಫರ್ಡ್ ವಿಶ್ವವಿಧ್ಯಾಲಯದಲ್ಲಿ ಮೆಟಿರಿಯಲ್ಸ್ ವಿಭಾಗದಲ್ಲಿ ಎಂಎಸ್ ಪದವಿ ಪಡೆದ ಸುಂದರ್ ಪಿಚ್ಚೈ 2002 ರಲ್ಲಿ ಅಲ್ಲಿನ ಪೆನ್ಸಿಲ್ವಿನಿಯಾ ಸ್ಕೂಲ್ ನಲ್ಲಿ ಎಂಬಿಎ ಪದವಿ ಕೂಡ ಪಡೆಯುತ್ತಾರೆ. ಸುಂದರ್ ಪಿಚ್ಚೈ ಅತ್ಯುತ್ತಮ ವಿಧ್ಯಾರ್ಥಿಯಾಗಿದ್ದರು. ಹಾಗಾಗಿ ಇವರಿಗೆ ಸ್ಕೈಬಲ್ ಸ್ಕಾಲರ್ ಎಂಬ ಬಿರುದು ಕೂಡ ದೊರೆತಿತ್ತು. ಅಲ್ಲಿ ಆಯ್ಕೆಯಾದ ಟಾಪ್ ವಿಧ್ಯಾರ್ಥಿಗಳಿಗೆ ಮಾತ್ರ ಈ ಬಿರುದು ನೀಡುವಂತದ್ದು.
ಆ ಬಳಿಕ, ಕಂಪನಿಯೊಂದಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡರು. ತದನಂತರ 2004 ರಲ್ಲಿ ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿ ಸೇರಿಕೊಂಡರು. ಆರಂಭದಲ್ಲಿ ಗೂಗಲ್ ಸಂಸ್ಥೆಯಲ್ಲಿ ಫಸ್ಟ್ ಲೆವೆಲ್ ವರ್ಕರ್ ಆಗಿ ಕಾರ್ಯ ಆರಂಭಿಸುತ್ತಾರೆ.
ಗೂಗಲ್ ಸರ್ಚ್ ಟೋನ್ ಬಾರ್ ತಾಂತ್ರಿಕ ವಿಭಾಗದ ಪುಟ್ಟ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾಗ ಅಂದು ಇಂಟರ್ನೆಟ್ ಎಕ್ಸ್ ಪ್ಲೋರರ್ ಮೂಲಕವೇ ಗೂಗಲ್, ಯಾಹೂ ಸರ್ಚ್ ಮಾಡಬೇಕಾಗಿತ್ತು. ಗೂಗಲ್ ಸರ್ಚ್ ಟೂಲ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಸುಂದರ್ ಪಿಚ್ಚೈಗೆ ವಿನೂತನವಾದ ಐಡಿಯಾ ಹೊಳೆದಿತ್ತು. ಅದೇನಪ್ಪಾ ಅಂದರೆ ಇತರೆ ವೆಬ್ ಸರ್ಚ್ ನಲ್ಲಿ ಗೂಗಲ್ ಸರ್ಚ್ ಮಾಡೋ ಬದಲು ಗೂಗಲ್ ಅನ್ನೇ ಸರ್ಚ್ ಇಂಜಿನ್ ಆಗಿ ಅಭಿವೃದ್ದಿ ಪಡಿಸಬಹುದು ಎಂಬುದು. ಇದನ್ನು ತನ್ನ ತಂಡದೊಂದಿಗೆ ಹಾಗೂ ಅಂದಿನ ಗೂಗಲ್ ಸಿಇಓ ಅವರಿಗೆ ತಿಳಿಸಿದಾಗ ಅಧಿಕವಾಗಿ ಖರ್ಚಾಗುತ್ತದೆ ಎಂದು ಸುಂದರ್ ಪಿಚ್ಚೈ ಅವರ ಆಲೋಚನೆಯನ್ನ ತಿರಸ್ಕಾರ ಮಾಡಿದರು.
ತದ ನಂತರ ಸರ್ಚ್ಬಾರ್ ನಲ್ಲಿ ಕೆಲವು ಸುಧಾರಣೆ ತರಲು ಯತ್ನಿಸಿದ ಸುಂದರ್ ಪಿಚ್ಚೈ ತಂಡದ ಫಲವಾಗಿ ಗೂಗಲ್ ಕ್ರೋಮ್ ಅಭಿವೃದ್ದಿ ಪಡಿಸಲಾಯಿತು. 2010 ರಷ್ಟರಲ್ಲಿ ಗೂಗಲ್ ಕ್ರೋಮ್ ಭಾರಿ ಜನಪ್ರಿಯ ಸರ್ಚ್ ಬಾರ್ ಆಗಿ ಹೊರಹೊಮ್ಮಿತು. ಈ ಮೂಲಕ ಸುಂದರ್ ಪಿಚ್ಚೈ ವಿಶ್ವವಿಖ್ಯಾತಿ ಅದರು.
ಹೀಗೆ ಜಗತ್ತಿನ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಜೀವನದ ಹಾದಿಯನ್ನು ಹಂಚಿಕೊಂಡು ಹೊಸ ಉದ್ಯಮಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡುತ್ತಿದ್ದರು. ಇದಾದ ಬಳಿಕ ಕ್ರೋಮ್ ಓಎಸ್, ಗೂಗಲ್ ಕ್ರೋಮ್, ಫೈರ್ ಫಾಕ್ಸ್ ಸರ್ಚ್ ಇಂಜಿನ್ ಗಳು ಪ್ರಪಂಚದ ಟಾಪ್ ಸರ್ಚ್ ಇಂಜಿನ್ ಆದವು.
2015 ರಲ್ಲಿ ಸುಂದರ್ ಪಿಚ್ಚೈ ಗೂಗಲ್ ಸಂಸ್ಥೆಯ ಸಿಇಓ ಆಗಿ ತದ ನಂತರ ಆಲ್ಫಬೆಟ್ ಇಂಕ್ ಬೋರ್ಡ್ ಸದಸ್ಯರು ಕೂಡ ಆದರು. ಇದೇ ಸಮಯದಲ್ಲಿ ಪ್ರತಿಷ್ಟಿತ ಸೋಶಿಯಲ್ ಮೀಡಿಯಾಗಳಾದ ಟ್ಟಿಟ್ಟರ್, ಫೇಸ್ಬುಕ್ ಸಂಸ್ಥೆಗಳು ಕೂಡ ಆಫರ್ ನೀಡಿದಾಗ ಅದನ್ನು ತಿರಸ್ಕರಿಸಿ ಗೂಗಲ್ ಕಂಪನಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನೂರು ಮಿಲಿಯನ್ ಆದಾಯ ಹೊಂದಿರುವ ಭಾರತೀಯ ಮೂಲದ ಅಮೇರಿಕನ್ನರಾಗಿದ್ದಾರೆ. ಸಣ್ಣ ಹಳ್ಳಿಯಿಂದ ಬೆಳೆದುಬಂದ ಸುಂದರ್ ಪಿಚ್ಚೈ ಅವರು ಇಂದು ಜಗತ್ತಿನಾದ್ಯಂತ ಗುರುತಿಸಿಕೊಂಡಿರುವ ಯಶಸ್ವಿ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ.