-->
vaccination scarcity - ಆಡಳಿತ ಪಕ್ಷ ಬೆಂಬಲಿತರಿಂದ ಜನ ಸಾಮಾನ್ಯರಿಗೆ ಅನ್ಯಾಯ, ಲಸಿಕೆ ಅಲಭ್ಯ : ಮುಸ್ಲಿಮ್ ಒಕ್ಕೂಟ ಖಂಡನೆ: ಕೆ.ಅಶ್ರಫ್

vaccination scarcity - ಆಡಳಿತ ಪಕ್ಷ ಬೆಂಬಲಿತರಿಂದ ಜನ ಸಾಮಾನ್ಯರಿಗೆ ಅನ್ಯಾಯ, ಲಸಿಕೆ ಅಲಭ್ಯ : ಮುಸ್ಲಿಮ್ ಒಕ್ಕೂಟ ಖಂಡನೆ: ಕೆ.ಅಶ್ರಫ್


ಕೊರೋನ ನಿಯಂತ್ರಣಕ್ಕಾಗಿ ಸರಕಾರ ಪ್ರಾಯೋಜಿತ ದ.ಕ. ಜಿಲ್ಲೆಯ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಆಡಳಿತ ಪಕ್ಷದ ಬೆಂಬಲಿಗರು ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ತಮ್ಮ ರಾಜಕೀಯ ಪ್ರಭಾವ ಬೀರುವ ಮೂಲಕ ತಮಗೆ ಬೇಕಾದವರಿಗೆ ಲಸಿಕೆ ಕೊಡಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.



ಲಸಿಕೆ ಪಡೆಯುವುದಕ್ಕೋಸ್ಕರ ಆನ್ ಲೈನ್ ಮೂಲಕ ಬುಕಿಂಗ್ ಮಾಡಿ ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಲ್ಲುವವರು ಟೋಕನ್ ಸಿಗದೆ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರದ ಗಬ್ಬು ವಾಸನೆ ಬಡಿಯುತ್ತಿದೆ ಎಂದು ಮಾಜಿ ಮೇಯರ್ ಅಶ್ರಫ್ ಆರೋಪಿಸಿದ್ದಾರೆ.


ಆರೋಗ್ಯ ಸಿಬ್ಬಂದಿ ಆಡಳಿತ ಪಕ್ಷ ಬಿಜೆಪಿ ಬೆಂಬಲಿಗರ ಒತ್ತಡಕ್ಕೆ ಮಣಿದು ಲಸಿಕೆಯನ್ನು ತಡೆದು ಇಟ್ಟು, ಸಾರ್ವಜನಿಕರಲ್ಲಿ ಇಂದಿನ ಲಸಿಕೆ ಮುಗಿದಿದೆ ಎಂಬುದಾಗಿ ಹೇಳಿ ಜನರನ್ನು ವಾಪಾಸು ಕಳುಹಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.







ಆದುದರಿಂದ ಉನ್ನತ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಶೀಘ್ರ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಲಸಿಕೆಗಳನ್ನು ಸರತಿ ಸಾಲಿನಲ್ಲಿ ನಿಂತ ವ್ಯಕ್ತಿಗಳಿಗೆ ಟೋಕನ್ ಮುಖಾಂತರ ನೀಡಬೇಕು. ಇಲ್ಲವಾದಲ್ಲಿ ಲಸಿಕಾ ಕೇಂದ್ರಗಳಲ್ಲಿಯೇ ಸಂತ್ರಸ್ತರ ಪರವಾಗಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕೆ. ಅಶ್ರಫ್ ಎಚ್ಚರಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article