
Vaccine on priority - ವಿದೇಶ ಪ್ರಯಾಣಿಕರಿಗೆ ಆದ್ಯತೆ ಲಸಿಕೆ ಲಭ್ಯ: ದ.ಕ. ಜಿಲ್ಲಾಡಳಿತ
Thursday, June 10, 2021
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲೂ 18 ವರ್ಷ ಮೇಲ್ಪಟ್ಟ ವಿದೇಶಕ್ಕೆ ಪ್ರಯಾಣಿಸುವರಿಗೆ ಮೊದಲ ಡೋಸ್ ಲಸಿಕೆ ಆದ್ಯತೆ ಮೇರೆಗೆ ಲಭ್ಯವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಭರವಸೆ ನೀಡಿದ್ದಾರೆ.
ವಿದೇಶಕ್ಕೆ ಹೋಗಲಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಲು ಜಿಲ್ಲಾಡಳಿತ ಆದೇಶಿಸಿದೆ.
ಜೂನ್ 14 ರ ಸೋಮವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ, ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ವಿದೇಶಕ್ಕೆ ಹೋಗಲಿರುವವರು ಅವರ ಪಾಸ್ ಪೋರ್ಟ್,ವಿಸಾ ದಾಖಲೆಯಾಗಿ ತೋರಿಸಿ ಅವರ ಗ್ರಾಮದ ಸ್ಥಳೀಯ ಲಸಿಕಾ ಕೇಂದ್ರದಲ್ಲೇ ಮೊದಲ ಆದ್ಯತೆಯ ಮೇರೆಗೆ ಲಸಿಕೆ ಪಡೆಯಲು ಸೂಚಿಸಲಾಗಿದೆ.