
VHP Jagarana Vedike- ಹಲ್ಲೆ, ಬೆದರಿಕೆ ಆರೋಪ: ಹಿಂದೂ ಪರ ಸಂಘಟನೆ ಕಾರ್ಯಕರ್ತರ ಪರಸ್ಪರ ಹೊಡೆದಾಟ, ಠಾಣೆಗೆ ದೂರು
Thursday, June 17, 2021
ಹಿಂದೂ ಸಂಘಟನೆಗಳು ಪರಸ್ಪರ ಬೆದರಿಕೆ, ಹಲ್ಲೆ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುತೂಹಲಕಾರಿ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಸಂಘಟನೆಯ ಪ್ರಮುಖ ನಾಯಕರಿಗೆ ಪದೇ ಪದೇ ಕಿರುಕುಳ, ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಪುತ್ತೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಕೂಡ ಪ್ರತ್ಯಾರೋಪ ಮಾಡಿತ್ತು.
ಈ ಪರಸ್ಪರ ಆರೋಪ- ಪ್ರತ್ಯಾರೋಪಗಳು ಮುಂದುವರಿದು, ಬೆದರಿಕೆ ಮತ್ತು ಹಲ್ಲೆಯ ಆರೋಪಗಳೂ ನಡೆದಿದ್ದವು.
ಕಳೆದ ಜೂನ್ 7ರಂದು ಎರಡು ಸಂಘಟನೆಗಳ ಕಾರ್ಯಕರ್ತರ ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಕಾರಿನ ಮೇಲೆ ದಾಳಿ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ಪ್ರಯತ್ನವನ್ನೂ ಮಾಡಿತ್ತು ಎಂದು ಉಭಯ ಸಂಘಟನೆಗಳು ಆರೋಪಿಸಿವೆ.
ಈ ಬಗ್ಗೆ ಬಂಟ್ವಾಳ ಪೊಲೀಸರಿಗೆ ದೂರು ನೀಡಲಾಗಿದ್ದು, ಹಿಂದೂ ಸಂಘಟನೆಗಳ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಸಮಾಧಾನ ಪಡಿಸುವುದು ಪೊಲೀಸರಿಗೆ ಹೊಸ ತಲೆನೋವು ತಂದಿದೆ ಎನ್ನಲಾಗಿದೆ.