Advocate Video Viral- "ನೀವು ಕಾಂಗ್ರೆಸ್ ನಾಯಿಗಳು": ಸಾರ್ವಜನಿಕವಾಗಿ ಯುವ ವಕೀಲರಿಂದ ಆಕ್ರೋಶ- ವೀಡಿಯೋ ವೈರಲ್
ಮಂಗಳೂರು: ಬಿಜೆಪಿ ಸ್ಥಳೀಯ ಮುಖಂಡರೊಬ್ಬರು ನಡು ರಸ್ತೆಯಲ್ಲಿ ನಿಂತು ನೀರಾವರಿ ಇಲಾಖೆಯ ಸಿಬಂದಿ ಮತ್ತು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ.
ಕೊಣಾಜೆ ಠಾಣೆ ವ್ಯಾಪ್ತಿಯ ಮುಡಿಪು ಬಳಿ ಈ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ನೀರಾವರಿ ಇಲಾಖೆ ವತಿಯಿಂದ ರಸ್ತೆ ಬದಿ ಅಗೆಯುವ ಕೆಲಸ ನಡೆದಿತ್ತು. ಈ ಕಾಮಗಾರಿ ನಡೆಯುವಾಗ ಸ್ಥಳೀಯ ಬಿಜೆಪಿ ಕಾರ್ಯಕರ್ತ ಹಾಗೂ ಯುವ ವಕೀಲರಾಗಿರುವ ಮಹಮ್ಮದ್ ಅಸ್ಗರ್ ಇದಕ್ಕೆ ಅನುಮತಿ ಸಿಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶ ತೋರಿಸುವಂತೆ ಇಲ್ಲವೇ ತಾವೇ ಲೆಟರ್‌ಹೆಡ್‌ನಲ್ಲಿ ಕಾಮಗಾರಿ ಬಗ್ಗೆ ವಿವರ ನೀಡುವಂತೆ ಆಗ್ರಹಿಸಿದ್ಧಾರೆ.
ಈ ವೇಳೆ, ನೀರಾವರಿ ಇಲಾಖೆಯ ಇಂಜಿನಿಯರ್ ಆಗಿರುವ ಮಹಿಳೆಯನ್ನು ನಿಂದಿಸಿದ್ದು, ನೀವು ಕಾಂಗ್ರೆಸ್ ಏಜಂಟ್. ಕಾಂಗ್ರೆಸಿನ ನಾಯಿಗಳು ಎಂದು ಮೂದಲಿಸಿದ್ದಾರೆ.
ನಿಮ್ಮ ಕಾಂಗ್ರೆಸಿನ ನೂರು ಕಾರ್ಯಕರ್ತರಿಗೆ ಬಿಜೆಪಿಯ ಒಬ್ಬ ಕಾರ್ಯಕರ್ತ ಸಾಕು. ನಿಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಬನ್ನಿ. ನೀವು ಬೇಕಿದ್ದರೆ ಕೇಸ್ ಮಾಡಿ, ಏನೇ ಮಾಡಿ.. ಎಂದು ಹೇಳಿದ್ದಾರೆ.
ನೀವು ಈ ಕಾಮಗಾರಿ ಮಾಡುತ್ತಿರುವುದಕ್ಕೆ ಆರ್ಡರ್ ಇದೆಯಾ ಎಂದು ತೋರಿಸಿ. ಆನಂತರ ಕೆಲಸ ಮಾಡಿ, ನನ್ನದೇನು ಆಕ್ಷೇಪ ಇಲ್ಲ. ನೀವು ಆರ್ಡರ್ ಪಡೆಯದೆ ಹೇಗೆ ಕಾಮಗಾರಿ ನಡೆಸುತ್ತೀರಿ.. ಎಂದು ಪ್ರಶ್ನೆ ಮಾಡಿದ್ದಾರೆ.
ಅಸ್ಗರ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿ ಪ್ರಕಾರ, ಶಾಸಕ ಯು.ಟಿ. ಖಾದರ್ ಅವರ ಅನುದಾನದಲ್ಲಿ ಕರ್ನಾಟಕ ನೀರಾವರಿ ಇಲಾಖೆಯಿಂದ ಕಾಮಗಾರಿ ನಡೆಸಲಾಗುತ್ತಿತ್ತು.