Women Commission- ಹುಡುಗಿಯರಿಗೆ ಮೊಬೈಲ್ ನೀಡಿದರೆ ಅತ್ಯಾಚಾರವಾಗುತ್ತದೆ- ಮಹಿಳಾ ಆಯೋಗ ಸದಸ್ಯೆಯ ವಿವಾದಾತ್ಮಕ ಹೇಳಿಕೆ
Thursday, June 10, 2021
ಯುವತಿಯರಿಗೆ ಮೊಬೈಲ್ ಕೊಡಬಾರದು. ಒಂದು ವೇಳೆ, ಮೊಬೈಲ್ ಕೊಟ್ಟರೆ ಅದು ಅವರ ಅತ್ಯಾಚಾರಕ್ಕೆ ಕಾರಣವಾಗುತ್ತದೆ.. ಹೀಗೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ.
ಅಲಿಘರ್ ಜಿಲ್ಲೆಯಲ್ಲಿ ಬುಧವಾರ ಮಹಿಳೆಯರಿಗೆ ಸಂಬಂಧಿಸಿದ ದೂರುದಾರರ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಹುಡುಗಿಯರಿಗೆ ಫೋನ್ ನೀಡಿದರೆ ಅವರು ಹುಡುಗರೊಂದಿಗೆ ಮಾತನಾಡುತ್ತಾರೆ. ಆ ನಂತರ ಅವರೊಂದಿಗೆ ಓಡಿ ಹೋಗುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರವನ್ನು ನೀಡಿದ್ದಾರೆ.
ಆದರೆ ಮೀನಾ ಕುಮಾರಿಯ ಈ ಅವಿವೇಕತನ ಹಾಗೂ ವಿವಾದಾತ್ಮಕ ಹೇಳಿಕೆಯಿಂದ ಉತ್ತರ ಪ್ರದೇಶ ಮಹಿಳಾ ಆಯೋಗ ಅಂತರ ಕಾಯ್ದುಕೊಂಡಿದೆ.