![Rehaman begins his 2nd innings in tv9- ರೆಹಮಾನ್ ಮತ್ತೆ ಟಿವಿ9ಗೆ: ಎರಡನೇ ಇನ್ನಿಂಗ್ಸ್ ಆರಂಭ Rehaman begins his 2nd innings in tv9- ರೆಹಮಾನ್ ಮತ್ತೆ ಟಿವಿ9ಗೆ: ಎರಡನೇ ಇನ್ನಿಂಗ್ಸ್ ಆರಂಭ](https://blogger.googleusercontent.com/img/b/R29vZ2xl/AVvXsEgkbpSf5B3OumXwd8rK_b0CabPuUr8AlqBpNOcx7xBTfCVowIz4ig7OjCLnv78fk0XNHHpmvtGgXwxkKYXr7xqTuCpB8x0aV0PyjEYGm74tzzsfyNZL5FN6t-Xk10sGQ8ULRJedPfvzTG4/w573-h640/Rehman+Hassan.jpg)
Rehaman begins his 2nd innings in tv9- ರೆಹಮಾನ್ ಮತ್ತೆ ಟಿವಿ9ಗೆ: ಎರಡನೇ ಇನ್ನಿಂಗ್ಸ್ ಆರಂಭ
ಕನ್ನಡ ಸುದ್ದಿ ಚಾನೆಲ್‌ಗಳಲ್ಲಿ ಅಗ್ರೆಸ್ಸಿವ್ ನ್ಯೂಸ್‌ಗೆ ಹೆಸರಾಗಿರುವ ಟಿವಿ9ಗೆ ರೆಹಮಾನ್ ಹಾಸನ್ ಮತ್ತೆ ಸೇರಿಕೊಂಡಿದ್ದಾರೆ. ಈ ಮೂಲಕ ಚಾನೆಲ್‌ನಲ್ಲಿ ಅವರು ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ.
ಮತ್ತೆ ಆ ಸುದ್ದಿ ವಾಹಿನಿ ಸೇರ್ಪಡೆ ಬಗ್ಗೆ ಸಾಮಾಜಿಕ ಜಾಲದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮುಖ್ಯ ನಿರ್ಮಾಪಕ ಮತ್ತು ನಿರೂಪಕರಾಗಿ ಸಂಸ್ಥೆಯ ಹುದ್ದೆಯನ್ನು ಅಲಂಕರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ತಾನೊಬ್ಬ ಪತ್ರಕರ್ತನಾಗಿ ಜನರ ಮುಂದೆ ಗುರುತಿಸಿಕೊಳ್ಳಲು ಕಾರಣವಾದ ಸುದ್ದಿವಾಹಿನಿಗೆ ಮತ್ತೆ ಹೋಗುತ್ತಿರುವುದು ರೋಮಾಂಚನದ ಅನುಭವ ಎಂದು ಹೇಳಿರುವ ರೆಹಮಾನ್, ಹೊಸ ಹುದ್ದೆ ಮತ್ತು ನೂತನ ಜವಾಬ್ದಾರಿಯೊಂದಿಗೆ ಕನ್ನಡ ನಾಡಿಗೆ ಸೇವೆ ಸಲ್ಲಿಸಲು ಬದ್ಧನಾಗಿದ್ದೇನೆ ಎಂದು ಹೇಳಿಕೊಂಡಿದ್ಧಾರೆ.
ಈ ಮೂಲಕ ಟಿವಿ9 ಮತ್ತಷ್ಟು ರಂಗುಪಡೆದುಕೊಳ್ಳಲಿದ್ದು, ಬಹುಕಾಲದ ಬಳಿಕ ಜನರ ರೆಹಮಾನ್ ಅವರನ್ನು ಈ ಸುದ್ದಿವಾಹಿನಿಯಲ್ಲಿ ನೋಡಲಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಯಾಗಿ ಕಿರುತೆರೆ ರಿಯಾಲಿಟಿ ಶೋಗೆ ಪದಾರ್ಪಣೆ ಮಾಡಿದ್ದ ರೆಹಮಾನ್, ಟಿವಿ9ಗೆ ವಿದಾಯ ಹೇಳಿದ್ದರು.