-->
Big Shock to Bombay Friends- ಬಾಂಬೆ ಫ್ರೆಂಡ್ಸ್ 17 ಶಾಸಕರಿಗೆ ಬಿಗ್ ಶಾಕ್: ಸಂಪುಟದಲ್ಲಿ ಹಸ್ತಕ್ಷೇಪ ಇಲ್ಲ ಎಂದ ಬಿಎಸ್‌ವೈ

Big Shock to Bombay Friends- ಬಾಂಬೆ ಫ್ರೆಂಡ್ಸ್ 17 ಶಾಸಕರಿಗೆ ಬಿಗ್ ಶಾಕ್: ಸಂಪುಟದಲ್ಲಿ ಹಸ್ತಕ್ಷೇಪ ಇಲ್ಲ ಎಂದ ಬಿಎಸ್‌ವೈ






ಚಾಮರಾಜನಗರ: ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಆಪರೇಷನ್ ಕಮಲ ಮೂಲಕ ಬಿಜೆಪಿ ಪಾಳಯ ಸೇರಿದ್ದ 17 ಮಂದಿ ಬಿಜೆಪಿ ಶಾಸಕರಿಗೆ ದೊಡ್ಡ ಆಘಾತ ಎದುರಾಗಿದೆ. ಮುಂದಿನ ಸಂಪುಟದಲ್ಲಿ ನಾನು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಢುವುದಿಲ್ಲ ಎಂದು ಬಿಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.



ಈ ಮೂಲಕ, ತನ್ನನ್ನೇ ನಂಬಿ ಬಿಜೆಪಿಗೆ ಜಿಗಿದಿದ್ದ 17 ಶಾಸಕರಿಗೆ ಸಂಪುಟ ಸ್ಥಾನ ಸಿಗುವ ಬಗ್ಗೆ ಅಭದ್ರತೆ ಉಂಟಾಗಿದೆ.



ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕು ಎಂಬುದು ಸಿಎಂ ಪರಮಾಧಿಕಾರ. ಈ ಬಗ್ಗೆ ನಾನು ಯಾವುದೇ ರೀತಿಯಲ್ಲಿ ಮಧ್ಯಪ್ರವೇಶ, ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವರಿಷ್ಠರ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ನಾನು ಅಡ್ಡ ಬರುವುದಿಲ್ಲ ಎಂದು ಹೇಳಿದ್ಧಾರೆ.



ಯಡಿಯೂರಪ್ಪ ಸರ್ಕಾರ ಪತನಗೊಂಡ ನಂತರ, ಬಿಜೆಪಿಗೆ ಬಂದಿದ್ದ ಶಾಸಕರು ಸಚಿವ ಸ್ಥಾನ ಕಳೆದುಕೊಂಡಿದ್ದರು. ಈ ಬಾರಿ ಮೂಲ ಬಿಜೆಪಿ ಶಾಸಕರ ಲಾಬಿ ಮುಂದೆ ತಮಗೆ ಮಣೆ ಹಾಕುತ್ತಾರೆಯೇ ಎಂಬ ಭೀತಿ ಇವರಿಗೆ ಎದುರಾಗಿದೆ.



ಈ ಬಗ್ಗೆ, ಕಡ್ಡಿ ಮುರಿದಂತೆ ಹೇಳಿಕೆ ನೀಡಿದ ಅವರು, ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಮುಖ್ಯಮಂತ್ರಿಯನ್ನಾಗಿ ಆರಿಸಲಾಗಿದೆ. ಸಚಿವ ಸಂಪುಟ ರಚನೆಯಲ್ಲಿ ನಾನು ಬೊಮ್ಮಾಯಿ ಅವರಿಗೆ ಯಾವುದೇ ಸಲಹೆಗಳನ್ನು ನೀಡುವುದಿಲ್ಲ. ಬಿಜೆಪಿಗೆ ಇತರ ಪಕ್ಷಗಳಿಂದ ಬಂದ ಶಾಸಕರ ಬಗ್ಗೆಯೂ ಯಾವುದೇ ಶಿಫಾರಸು ಮಾಡುವುದಿಲ್ಲ ಎಂದು ಹೇಳಿದರು.





ಬೊಮ್ಮಾಯಿ ಅವರಿಗೆ ಈ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾರಿಗೆ ಸ್ಥಾನ ನೀಡಬೇಕು, ಮತ್ತು ಅವರಿಗೆ ಯಾವ್ಯಾವ ಖಾತೆ ನೀಡಬೇಕು ಎಂಬುದು ಬೊಮ್ಮಾಯಿ ಅವರೇ ನಿರ್ಧರಿಸುತ್ತಾರೆ. ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಎಸ್‌ವೈ ಹೇಳಿದರು.

Ads on article

Advertise in articles 1

advertising articles 2

Advertise under the article