![ಮಹತ್ವದ ಜವಾಬ್ದಾರಿಗಾಗಿ ಸಿಎಂ ಅವಕಾಶ ವಂಚಿತ?- ಬಿಎಲ್ ಸಂತೋಷ್‌ಗೆ ದ್ರಾಕ್ಷಿ ಹುಳಿಯಾಯಿತೇ..? ಮಹತ್ವದ ಜವಾಬ್ದಾರಿಗಾಗಿ ಸಿಎಂ ಅವಕಾಶ ವಂಚಿತ?- ಬಿಎಲ್ ಸಂತೋಷ್‌ಗೆ ದ್ರಾಕ್ಷಿ ಹುಳಿಯಾಯಿತೇ..?](https://blogger.googleusercontent.com/img/b/R29vZ2xl/AVvXsEihpsO4fdrfXz9gwCuo5_IEsOrF0z7J4N-XXbLC1-P1GyDS35gOPvptkjZGCufoDCMTde0jOUfVKimUJnMvV7d9JtZiPe_gWCCvHcbcNJSIUmqiHQpJya3ge4MIhep4IccyRNx49wskcJ4/w640-h360/bjp.jpg)
ಮಹತ್ವದ ಜವಾಬ್ದಾರಿಗಾಗಿ ಸಿಎಂ ಅವಕಾಶ ವಂಚಿತ?- ಬಿಎಲ್ ಸಂತೋಷ್‌ಗೆ ದ್ರಾಕ್ಷಿ ಹುಳಿಯಾಯಿತೇ..?
ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಮುತ್ಸದ್ದಿ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು, ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಗದ್ದುಗೆ ಏರಲಿದ್ದಾರೆ.
ಈ ಬಗ್ಗೆ ಬೆಳಗ್ಗಿನಿಂದಲೇ ರಾಜಕೀಯ ಚಟುವಟಿಕೆಗಳು ನಡೆದಿದ್ದು, ರಾಜ್ಯಕ್ಕೆ ಕೇಂದ್ರದಿಂದ ಆಗಮಿಸಿರುವ ವೀಕ್ಷಕರು ಅಳೆದು ತೂಗಿ ಯಾವುದೇ ತೊಂದರೆ ಬಾರದಂತೆ ಯಡಿಯೂರಪ್ಪ ಅವರ ಬಾಯಿಯಿಂದಲೇ ನೂತನ ಮುಖ್ಯಮಂತ್ರಿಯ ಘೋಷಣೆ ಮಾಡಿದ್ಧಾರೆ.
ಈ ಮಧ್ಯೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಪ್ರಹ್ಲಾದ್ ಜೋಷಿ ಸಿಎಂ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರಿಗೆ ಈ ಬಾರಿ ಸಿಎಂ ಸ್ಥಾನ ಬಹುತೇಕ ನಿಚ್ಚಳವಾಗಿತ್ತು.
ಒಂದು ಮಾಹಿತಿ ಪ್ರಕಾರ ಉತ್ತರಪ್ರದೇಶ ಚುನಾವಣೆ ಸದ್ಯದ್ದಲೇ ನಡೆಯಲಿದ್ದು, ಅಲ್ಲಿನ ಚುನಾವಣಾ ಉಸ್ತುವಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವುದರಿಂದಾಗಿ ಅವರನ್ನು ರಾಜ್ಯದ ಸಿಎಂ ಮಾಡಲು ವರಿಷ್ಟರು ಮುಂದಾಗಲಿಲ್ಲ ಎಂದು ಹೇಳಲಾಗಿದೆ.
ಈ ಎಲ್ಲ ಕಾರಣಗಳಿಂದ ಬಿ.ಎಲ್.ಸಂತೋಷ್ ಅವರನ್ನು ನೇಮಕ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಆಗಲಿ, ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಕೂಡ ಯಾವುದೇ ಸಮ್ಮತಿಯನ್ನು ಸೂಚಿಸಿಲ್ಲ ಎನ್ನಲಾಗಿದೆ.
ಪಕ್ಷ ಸಂಘಟನೆಗೆ ಬಿ. ಎಲ್. ಸಂತೋಷ್ ಅತ್ಯಗತ್ಯವಾಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಅವರನ್ನು ಕೂರಿಸಲು ಹೈಕಮಾಂಡ್ ಮುಂದೆ ಬಂದಿಲ್ಲ ಎಂದು ಹೇಳಲಾಗಿದೆ.