Corona Update: ರಾಜ್ಯದಲ್ಲಿ ಸಕ್ರಿಯ ಕೊರೋನಾ ಸಂಖ್ಯೆಯಲ್ಲಿ ಇಳಿಕೆ- ದಕ್ಷಿಣ ಕನ್ನಡದಲ್ಲಿ ದಾಖಲೆ ಏರಿಕೆ!
ಕರ್ನಾಟಕ ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿನ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದೆ.
ಆದರೆ, ಕರಾವಳಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದರೆ, ಉಡುಪಿಯಲ್ಲಿ ಅಲ್ಪ ಇಳಿಕೆ ದಾಖಲಾಗಿದೆ.
ಬುಧವಾರ ಹೊಸದಾಗಿ 2,743 ಕೊರೊನಾ ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಒಟ್ಟು 75 ಮಂದಿ ಬಲಿಯಾಗಿದ್ದಾರೆ. ಆದರೆ, ನೆಮ್ಮದಿಯ ವಿಚಾರ ಎಂದರೆ, 3,081 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ರಾಜ್ಯದಲ್ಲಿ ಈಗ ಒಟ್ಟು 39,603 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಸೋಂಕಿನ ಪಾಸಿಟಿವಿಟಿ ದರ ಶೇಕಡಾ 1.64 ರಷ್ಟಿದೆ. ಒಟ್ಟು ಸೋಂಕಿತರ ಪೈಕಿ ಮರಣ ಪ್ರಮಾಣ ಶೇಕಡಾ 2.73ರಷ್ಟು ದಾಖಲಾಗಿದೆ.
ರಾಜ್ಯದಲ್ಲಿ ಇದುವರೆಗೆ ಒಟ್ಟು 35,601 ಮಂದಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 28,62,338ರಷ್ಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಲ್ಲಿ ದಾಖಲೆ ಏರಿಕೆ
ದಕ್ಷಿಣ ಕನ್ನಡದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜಿಲ್ಲೆಯಲ್ಲಿ ಇಂದು ಒಟ್ಟು 304 ಮಂದಿಗೆ ಪಾಸಿಟಿವ್ ಆಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 94592 ಆಗಿದೆ. ಮಂಗಳವಾರ ಸೋಂಕಿತರ ಸಂಖ್ಯೆ 216 ಆಗಿತ್ತು.
335 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯ ಭಾಗ್ಯ ಪಡೆದಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 90520ಕ್ಕೇರಿದೆ.
ಸಕ್ರಿಯ ಸೋಂಕಿತರ ಸಂಖ್ಯೆ 2790ಕ್ಕೆ ಇಳಿದಿದೆ.
ಆದರೆ, ಕೊರೋನಾ ಸೋಂಕಿಗೊಳಗಾಗಿ ಮೃತಪಟ್ಟವರ ಸಂಖ್ಯೆ 14 ಆಗಿದೆ. ಸಾವಿನ ಸಂಖ್ಯೆ 1279ಕ್ಕೇರಿದೆ.
ಉಡುಪಿಯಲ್ಲಿ ಕೊರೋನಾ ಸೋಂಕಿನಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಇಂದು ಒಟ್ಟು 101 ಮಂದಿಗೆ ಸೋಂಕು ತಗುಲಿದೆ. ಮಂಗಳವಾರ ಸೋಂಕಿತರ ಸಂಖ್ಯೆ 113 ಆಗಿತ್ತು.
74 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯ ಭಾಗ್ಯ ಪಡೆದಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 65708ಕ್ಕೇರಿದೆ. ಸಕ್ರಿಯ ಸೋಂಕಿತರ ಸಂಖ್ಯೆ 1021ಕ್ಕೆ ಇಳಿದಿದೆ.
ಕೊರೋನಾ ಸೋಂಕಿಗೊಳಗಾಗಿ ಇಂದು ಯಾರೂ ಮೃತಪಟ್ಟಿಲ್ಲ ಎಂಬುದು ನೆಮ್ಮದಿಯ ವಿಷಯ. ಇದುವರೆಗೆ ಸಾವಿನ ಸಂಖ್ಯೆ 400 ದಾಖಲಾಗಿದೆ.