![Corona Update- ಕರಾವಳಿಯಲ್ಲಿ ಮತ್ತೆ ಕೋವಿಡ್ ತ್ರಿಶತಕ: ರಾಜ್ಯದಲ್ಲಿ ಅತಿ ಹೆಚ್ಚು ಸಾವು ದಾಖಲಿಸಿದ ದ.ಕ. Corona Update- ಕರಾವಳಿಯಲ್ಲಿ ಮತ್ತೆ ಕೋವಿಡ್ ತ್ರಿಶತಕ: ರಾಜ್ಯದಲ್ಲಿ ಅತಿ ಹೆಚ್ಚು ಸಾವು ದಾಖಲಿಸಿದ ದ.ಕ.](https://blogger.googleusercontent.com/img/b/R29vZ2xl/AVvXsEix8NPHC4C-eOgd45bRgA7u8Y6jKy1QjTAIZjc0POl1iWBVuGjWWJRuYCGvVockSJxpgJLAlweJ_06_NFILkVBvzrlHXVRMM69LoVE3zUiE6bCn4VS-eis6lKlvJOr708k_9ebLxb_sAxw/w640-h434/covid-impacts-to-business-graph-stock-market-crash-coronavirus-pandemic-world-economy-hits-novel-corona-virus-concept-181713195.jpg)
Corona Update- ಕರಾವಳಿಯಲ್ಲಿ ಮತ್ತೆ ಕೋವಿಡ್ ತ್ರಿಶತಕ: ರಾಜ್ಯದಲ್ಲಿ ಅತಿ ಹೆಚ್ಚು ಸಾವು ದಾಖಲಿಸಿದ ದ.ಕ.
ದಕ್ಷಿಣ ಕನ್ನಡದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬುಧವಾರ 337 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನ ಖಚಿತಪಡಿಸಿದೆ. ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಬೆಂಗಳೂರು ನಗರದಲ್ಲಿ 376 ಪ್ರಕರಣಗಳು ಕಾಣಿಸಿಕೊಂಡಿದೆ.
ಇನ್ನು ಸಾವಿನ ಸಂಖ್ಯೆಯಲ್ಲಿ ಮಂಗಳೂರು ರಾಜ್ಯದಲ್ಲೇ ನಂಬರ್ ವನ್ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಐದು ಮಂದಿ ಕೋವಿಡ್‌ನಿಂದಾಗಿ ಮರಣ ಹೊಂದಿದ್ದು, ಬೆಂಗಳೂರು ನಗರ 3 ಸಾವಿನೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ.
ಇನ್ನೂ ಆತಂಕಕಾರಿ ಬೆಳವಣಿಗೆ ಎಂದರೆ, ಉಡುಪಿ ರಾಜ್ಯದಲ್ಲಿ ಮೂರನೇ ಗರಿಷ್ಠ ಕೋವಿಡ್ ಪಾಸಿಟಿವ್ ಕೇಸುಗಳನ್ನು ದಾಖಲಿಸಿಕೊಂಡಿದೆ. ಮೂರಂಕೆ ದಾಟಿದ ಮೂರೇ ಜಿಲ್ಲೆಗಳಲ್ಲಿ ಉಡುಪಿಯೂ ಒಂದು. ಕೊರೋನಾ ವ್ಯಾಪಕವಾಗಿದ್ದ ಮೈಸೂರು ಮತ್ತು ಇತರ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದರೂ ಕರಾವಳಿಯಲ್ಲಿ ವೈರಸ್ ಹಾವಳಿ ತಡೆ ಇಲ್ಲದಂತೆ ಮುನ್ನುಗ್ಗುತ್ತಿದೆ.
ಇನ್ನು ಕರಾವಳಿಯ ನೆರೆಹೊರೆಯ ಜಿಲ್ಲೆಗಳಾದ ಉ.ಕ.ದಲ್ಲಿ 57, ಶಿವಮೊಗ್ಗ 86, ಹಾಸನ 97, ಚಿಕ್ಕಮಗಳೂರು 51, ಕೊಡಗು 78 ಕೇಸುಗಳು ದಾಖಲಾಗಿವೆ. ಗದಗ, ಕೊಪ್ಪಳ, ರಾಮನಗರದಲ್ಲಿ ಶೂನ್ಯ ಕೇಸು... ರಾಯಚೂರು, ಯಾದಗಿರಿಯಲ್ಲಿ ಒಂದು ಪಾಸಿಟಿವ್ ಕೇಸುಗಳು ದಾಖಲಾಗಿವೆ.ಬೀದರ್, ಹಾವೇರಿಯಲ್ಲಿ ಎರಡು ಪ್ರಕರಣ, ಬಾಗಲಕೋಟೆ, ಧಾರವಾಡದಲ್ಲಿ ಮೂರು ಹೊಸ ಪ್ರಕರಣಗಳು ದಾಖಲಾಗಿವೆ.