
corona update: ದ.ಕ. ಕೊರೋನಾ ದ್ವಿಶತಕ: ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮತ್ತೆ ಏರಿಕೆ ಕಂಡಿದ್ದು, ದ್ವಿಶತಕ ಬಾರಿಸಿದೆ. ಸೋಮವಾರ 125 ಹೊಸ ಸೋಂಕಿತರನ್ನು ಕಂಡ ಜಿಲ್ಲೆಯಲ್ಲಿ ಇಂದು 200 ಮಂದಿಗೆ ಸೋಂಕು ತಗುಲಿದೆ.
ಆದರೆ, ನೆಮ್ಮದಿಯ ವಿಚಾರ ಎಂದರೆ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಮೂರು ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದರೆ, 215 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆಯ ಪಟ್ಟಿಯಲ್ಲಿ ಬೆಂಗಳೂರು ನಗರ ಮತ್ತು ಮೈಸೂರು ಬಿಟ್ಟರೆ ದಕ್ಷಿಣ ಕನ್ನಡ ಮೂರನೇ ಸ್ಥಾನದಲ್ಲಿದೆ.
ಉಡುಪಿ ಜಿಲ್ಲೆಯಲ್ಲೂ ಕೊರೋನಾ ತಕ್ಕಮಟ್ಟಿಗೆ ತಹಬಂದಿಗೆ ಬಂದಿದೆ. ನಿನ್ನೆ ಮೂರಂಕೆ ದಾಟಿದ್ದ ಸೋಂಕಿತರ ಸಂಖ್ಯೆ ಇಂದು 68ಕ್ಕೆ ಇಳಿದಿದೆ. 113 ಮಂದಿ ಆಸ್ಪತ್ರೆಯಿಂದ ಚಿಕಿತ್ಸೆ ಮುಗಿಸಿ ಮನೆಗೆ ವಾಪಸಾಗಿದ್ದಾರೆ. ಕೋವಿಡ್ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ: ಹಾಸನ 108, ಕೊಡಗು 58, ಚಿಕ್ಕಮಗಳೂರು 81, ಉತ್ತರ ಕನ್ನಡ 53, ಶಿವಮೊಗ್ಗ 36.
ರಾಜ್ಯದಲ್ಲಿ ಒಟ್ಟು 1464 ಹೊಸ ಕೊರೋನಾ ಸೋಂಕು ದಾಖಲಾಗಿದ್ದು, ಒಟ್ಟು 29 ಮಂದಿ ಸಾವನ್ನಪ್ಪಿದ್ಧಾರೆ.