![DK Bus Rate Hiked!- ಲಾಕ್‌ಡೌನ್ ಬೆನ್ನಲ್ಲೇ ಮತ್ತೊಂದು ಶಾಕ್: ಕರಾವಳಿಯಲ್ಲಿ ಬಸ್ ದರ ಏರಿಕೆ DK Bus Rate Hiked!- ಲಾಕ್‌ಡೌನ್ ಬೆನ್ನಲ್ಲೇ ಮತ್ತೊಂದು ಶಾಕ್: ಕರಾವಳಿಯಲ್ಲಿ ಬಸ್ ದರ ಏರಿಕೆ](https://blogger.googleusercontent.com/img/b/R29vZ2xl/AVvXsEjnCV0jGE3NYb0n9jGkFrtn7yQ9aXG8YAfm7AYYMTJr_HYSngjyIZVwMU5b01QtjwTFLk_9Sd6w6jfpmaOgxOlDD2RRt4S5LL1JovxyKkwO42QAQfzOhStdD_by5U2LfpPovMko0P5aya8/w640-h610/Private+bus.jpg)
DK Bus Rate Hiked!- ಲಾಕ್‌ಡೌನ್ ಬೆನ್ನಲ್ಲೇ ಮತ್ತೊಂದು ಶಾಕ್: ಕರಾವಳಿಯಲ್ಲಿ ಬಸ್ ದರ ಏರಿಕೆ
ಕರಾವಳಿಯಲ್ಲಿ ಲಾಕ್‌ಡೌನ್ ಹೇರಿಕೆಯಿಂದ ಕಂಗಾಲಾಗಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಜಿಲ್ಲಾಡಳಿತ ಮತ್ತೊಂದು ಬರೆ ಹಾಕಿದೆ. ನೂತನ ಪರಿಷ್ಕೃತ ದರವನ್ನು ಜಿಲ್ಲಾ ಸಾರಿಗೆ ಪ್ರಾಧಿಕಾರ ಪ್ರಕಟಿಸಿದ್ದು, ಸೋಮವಾರದಿಂದಲೇ ಈ ಹೊಸ ಬಸ್ ದರ ಜಾರಿಗೆ ಬಂದಿದೆ.
ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಬೇಡಿಕೆಗೆ ಬಹುತೇಕ ಮಣೆ ಹಾಕುವಂತಹ ಆದೇಶವನ್ನು ಜಿಲ್ಲಾಧಿಕಾರಿ ನೇತೃತ್ವದ ದ.ಕ. ಜಿಲ್ಲಾ ಸಾರಿಗೆ ಪ್ರಾಧಿಕಾರ ಮಾಡಿದೆ.
ಎರಡು ಕಿಲೋ ಮೀಟರ್ ವರೆಗೆ 2016ರ ವರೆಗೆ ಕನಿಷ್ಟ 7 ರೂಪಾಯಿ ಇದ್ದ ದರ ಇನ್ನು ಮುಂದೆ ಕನಿಷ್ಟ 12 ಆಗಲಿದೆ.
ಮೊದಲ ಎರಡು ಸ್ಟೇಜ್‌ಗಳನ್ನು ಇದೇ ಮೊದಲ ಬಾರಿಗೆ ಒಂದೇ ಸ್ಟೇಜ್ ಆಗಿ ಪರಿಗಣಿಸಿದ್ದು, ಮೊದಲ ಎರಡು ಸ್ಟೇಜ್‌ಗಳಲ್ಲಿ ಈ ದರ ಜಾರಿಗೆ ಬರಲಿದೆ. ಇದರಿಂದ ಮೊದಲ ಸ್ಟೇಜ್‌ನಲ್ಲಿ ಶೇ. 170ರಷ್ಟು ದರ ಏರಿಕೆಯಾಗಿದೆ.
ನಾಲ್ಕು ಕಿಲೋ ಮೀಟರ್‌ನಿಂದ ಆರು ಕಿ.ಮೀ. ವರೆಗೆ ರೂ. 15 ಆಗಲಿದೆ. ಈ ಹಿಂದೆ ಈ ದರ ಕೇವಲ 9 ರೂ. ಆಗಿತ್ತು.
ಇನ್ನು 10 ರೂ. ಆಗಿದ್ದ ದರವನ್ನು 16ಕ್ಕೇರಿಸಿದ್ದು, 15 ರೂ. ಇದ್ದ ದರ ಇನ್ನು ಮುಂದೆ 23 ಆಗಲಿದೆ.
ಇದರ ಜೊತೆಗೆ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗುವ ಎಲ್ಲ ಖಾಸಗಿ ಮಜಲು ವಾಹನಗಳು ಪ್ರಯಾಣಿಕರಿಂದ ಪ್ರತ್ಯೇಕವಾಗಿ ಟೋಲ್ ದರವನ್ನು ಪಡೆಯುವಂತೆ ಬಸ್ ಮಾಲಕರಿಗೆ ಜಿಲ್ಲಾ ಪ್ರಾಧಿಕಾರ ನಿರ್ದೇಶನ ನೀಡಿದೆ.