Drishyam-2 Kannada Cinema- ಸೆಟ್ಟೇರಿದ ಬಹುನಿರೀಕ್ಷಿತ ದೃಶ್ಯಂ 2: ತಾರಗಣದಲ್ಲಿ ರವಿ ಜೊತೆ ಅನಂತ್‌ನಾಗ್
ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆಯ ದೃಶ್ಯಂ 2 ರಿಮೇಕ್ ಚಿತ್ರ ಸೆಟ್ಟೇರಿದೆ. ಕನಸುಗಾರ ವಿ ರವಿಚಂದ್ರನ್ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮಲಯಾಳಂ ನಲ್ಲಿ ದೃಶ್ಯಂ 2 ಅಮೆಜಾನ್ ಪ್ರೈಂ ನಲ್ಲಿ ತೆರೆಕಂಡಿತ್ತು.
ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್ ಇರುವ ದೃಶ್ಯಂ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರೆ ಭಾಷೆಗಳಿಗೂ ರಿಮೇಕ್ ಆಗಿ ಭಾರೀ ಯಶಸ್ಸು ಕಂಡಿತ್ತು.
ಫ್ಯಾಮಿಲಿ ಸಮೇತ ವೀಕ್ಷಿಸ ಬಹುದಾದ ಸದಭಿರುಚಿಯ ಚಿತ್ರ ದೃಶ್ಯಂನ ಮುಂದಿನ ಭಾಗವನ್ನೂ ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು.
ಇದೀಗ ದೃಶ್ಯಂ 2 ಮತ್ತೆ ರೀಮೇಕ್ ಆಗುತ್ತಿದೆ. ರವಿಚಂದ್ರನ್ ಅವರಿಗೆ ವಿಭಿನ್ನ ಇಮೇಜ್ ಗಳಿಸಿಕೊಟ್ಟ ಚಿತ್ರವೂ ಹೌದು.
ರವಿಚಂದ್ರನ್ ಜೊತೆಗೆ ಅನಂತನಾಗ್ ಹೊಸ ಸೇರ್ಪಡೆಯಾಗಿದ್ದಾರೆ. ಮೂಲ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದರು. ರವಿಚಂದ್ರನ್ ಗೆ ಜೋಡಿಯಾಗಿ ನವ್ಯಾ ನಾಯರ್ ನಟಿಸುತ್ತಿದ್ದಾರೆ. ದೃಶ್ಯಂ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲಿಯೂ ಇದ್ದಾರೆ.
ಪ್ರಮೋದ್ ಶೆಟ್ಟಿ ಹೊಸ ಸೇರ್ಪಡೆಯಾಗಿದ್ದಾರೆ. ಕನ್ನಡದಲ್ಲಿ ಮುಖೇಶ್ ಮೆಹ್ತಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಿ ವಾಸು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.