
unisex assault, accused arrested- ಕದ್ರಿ ಯೂನಿಸೆಕ್ಸ್ ಸಲೂನ್ ದಾಂಧಲೆ, ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪಿ ಸೆರೆ
Friday, July 16, 2021
ಮಂಗಳೂರಿನ ಕದ್ರಿಯಲ್ಲಿ ಯೂನಿಸೆಕ್ಸ್ ಸಲೂನ್‌ಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ, ಅನುಚಿತ ವರ್ತನೆ ಮತ್ತು ದರೋಡೆ ನಡೆಸಿದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತನನ್ನು ಅತ್ತಾವರದ ನಿವಾಸಿ ಅಬ್ದುಲ್ ದಾವೂದ್ ಎಂದು ಗುರತಿಸಲಾಗಿದೆ. ಈ ಘಟನೆ 15 ದಿನಗಳ ಹಿಂದೆ ನಡೆದಿತ್ತು.
ಜುಲೈ 1ರಂದು ಕದ್ರಿಯ ಬ್ಲಿಸ್ ಸಿಗ್ನೇಚರ್ ಯೂನಿಸೆಕ್ಸ್ ಪಾರ್ಲರ್‌ಗೆ ಭೇಟಿ ನೀಡಿದ್ದ ಆರೋಪಿ ಅಬ್ದುಲ್ ದಾವೂದ್ ಮಹಿಳೆ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಲ್ಲದೆ 14 ಸಾವಿರ ರೂ. ದರೋಡೆ ಮಾಡಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿತ್ತು.
ಯೂನಿಸೆಕ್ಸ್ ಮಾಲಕಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಅಬ್ದುಲ್ ದಾವೂದ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು, ಆರೋಪಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.