![Child Line rescue Kid- ಮಂಗಳೂರು: ಸ್ಟೇಟ್ ಬ್ಯಾಂಕ್ ಬಳಿ 2 ತಿಂಗಳ ಮಗು ಜೊತೆ ಪಾನಮತ್ತ ಮಹಿಳೆ; ರಕ್ಷಣೆ ಮಾಡಿದ ಚೈಲ್ಡ್ ಲೈನ್ Child Line rescue Kid- ಮಂಗಳೂರು: ಸ್ಟೇಟ್ ಬ್ಯಾಂಕ್ ಬಳಿ 2 ತಿಂಗಳ ಮಗು ಜೊತೆ ಪಾನಮತ್ತ ಮಹಿಳೆ; ರಕ್ಷಣೆ ಮಾಡಿದ ಚೈಲ್ಡ್ ಲೈನ್](https://blogger.googleusercontent.com/img/b/R29vZ2xl/AVvXsEjO0YNY1gSVjPmYUjwK8gnUtjL-vZ86xfDM6L6cy9fLY1rx7yHPhQ4mpGKeuBUK_D87k4lkCP5FydRFlLPUCKpnvqk6-RjbSuqBZSk5T_ehsfxj3exVH3ZBduxBGCZv4KEtW3yXSo3T0Po/w640-h360/child+rescue.jpg)
Child Line rescue Kid- ಮಂಗಳೂರು: ಸ್ಟೇಟ್ ಬ್ಯಾಂಕ್ ಬಳಿ 2 ತಿಂಗಳ ಮಗು ಜೊತೆ ಪಾನಮತ್ತ ಮಹಿಳೆ; ರಕ್ಷಣೆ ಮಾಡಿದ ಚೈಲ್ಡ್ ಲೈನ್
ಮಂಗಳೂರು ನಗರದ ಹೃದಯ ಭಾಗದಲ್ಲಿ ಇರುವ ಸ್ಟೇಟ್ ಬ್ಯಾಂಕ್ ಬಳಿ ರಸ್ತೆ ಬದಿಯಲ್ಲಿ 2 ತಿಂಗಳ ಮಗುವಿನ ಜೊತೆ ಮಹಿಳೆಯೊಬ್ಬಳು ಪಾನಮತ್ತಳಾಗಿ ಬಿದ್ದಿದ್ದ ಘಟನೆ ವರದಿಯಾಘಿದೆ.
ಈ ಪಾನಮತ್ತ ಮಹಿಳೆಯ ಜೊತೆ ಇದ್ದ ಎರಡು ತಿಂಗಳ ಮಗುವನ್ನು ಚೈಲ್ಡ್ ಲೈನ್-1098 ದ.ಕ.ಜಿಲ್ಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿದೆ.
ನಗರದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಸಿಬ್ಬಂದಿ ಸಹಯೋಗದೊಂದಿಗೆ ಆಕೆಯನ್ನು ಈ ಸ್ಥಳದಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಸ್ವಾಧಾರ ಕೇಂದ್ರದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಚೈಲ್ಡ್ ಲೈನ್-1098 ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ತಂಡದ ಸದಸ್ಯೆಯಾದ ಅಸುಂತಾ ಹಾಗೂ ಕವನ್ ಕಬಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಮಾ, ಹಾಗೂ ಬಂದರ್ ಪೊಲೀಸ್ ಠಾಣೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನೆರವಾದರು.
ಈಗಾಗಲೇ ನಗರದಲ್ಲಿ ಭಿಕ್ಷಾಟನೆ ನಿರತ ಮಕ್ಕಳ ಬಗ್ಗೆ ಚೈಲ್ಡ್ ಲೈನ್ ನಿಗಾ ವಹಿಸಿದೆ.
ಶೀಘ್ರದಲ್ಲೇ ಜಿಲ್ಲಾಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಭಿಕ್ಷಾಟನೆಯಲ್ಲಿ ನಿರತ ಮಕ್ಕಳನ್ನು ರಕ್ಷಿಸುವ ಅಭಿಯಾನ ಕೈಗೊಳ್ಳಲಾಗುವುದು ಎಂದು ಚೈಲ್ಡ್ ಲೈನ್ ಜಿಲ್ಲಾ ಘಟಕ ಹೇಳಿದೆ.