-->
Lady Officer- ಬೆಳ್ತಂಗಡಿಯ ಮಲೆಕುಡಿಯ ಯುವತಿ ಈಗ ದೇವರಾಜು ಅರಸು ಅಭಿವೃದ್ಧಿ ನಿಗಮದ ಅಧಿಕಾರಿ!

Lady Officer- ಬೆಳ್ತಂಗಡಿಯ ಮಲೆಕುಡಿಯ ಯುವತಿ ಈಗ ದೇವರಾಜು ಅರಸು ಅಭಿವೃದ್ಧಿ ನಿಗಮದ ಅಧಿಕಾರಿ!




ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಪಿಲಿಕಲ ಎಂಬಲ್ಲಿನ ಮಲೆಕುಡಿಯ ಸಮುದಾಯದ ಜಯಶ್ರೀ ಪಿಲಿಕಲ ರವರು ದೇವರಾಜು ಅರಸು ಅಭಿವೃದ್ಧಿ ನಿಗಮ ಮೂಲ್ಕಿ ತಾಲೂಕು ಇಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿಯುಕ್ತರಾಗಿದ್ದಾರೆ.




ಇವರು ನೆರಿಯ ಆಲಂಗಾಯಿ ಆಶ್ರಮ ಶಾಲೆಯಲ್ಲಿ ಪ್ರಾಥಮಿಕ , ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಸವಣಾಲು ಇಲ್ಲಿ ಪ್ರೌಢ ಶಿಕ್ಷಣ , ಪಿಯುಸಿ ಶಿಕ್ಷಣ ಗುರುದೇವ ಕಾಲೇಜ್ , ಪದವಿ ಶಿಕ್ಷಣವನ್ನು ಎಸ್.ಡಿ.ಎಂ ಕಾಲೇಜಿನಲ್ಲಿ , ಸ್ನಾತಕೋತ್ತರ ಪದವಿಯನ್ನು (MHRD) ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿರುತ್ತಾರೆ.



ಇವರು ಸವಣಾಲು ಗ್ರಾಮದ ಪಿಲಿಕಲ ಮಹಾಬಲ ಮಲೆಕುಡಿಯ ಎಂಬವರ ಮಗಳಾಗಿದ್ದು , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ , ದ.ಕ ಜಿಲ್ಲಾ ಸಹಸಂಚಾಲಕ , ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲರವರ ಸಹೋದರಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article