![Lock Down Relaxed- ಲಾಕ್‌ಡೌನ್‌ನಿಂದ ಕಂಗೆಟ್ಟ ಕರಾವಳಿಗೆ ಸಿಹಿ ಸುದ್ದಿ: ಸಂಜೆ 5ರ ವರೆಗೆ ಸಡಿಲಿಕೆ Lock Down Relaxed- ಲಾಕ್‌ಡೌನ್‌ನಿಂದ ಕಂಗೆಟ್ಟ ಕರಾವಳಿಗೆ ಸಿಹಿ ಸುದ್ದಿ: ಸಂಜೆ 5ರ ವರೆಗೆ ಸಡಿಲಿಕೆ](https://blogger.googleusercontent.com/img/b/R29vZ2xl/AVvXsEhbyjIZkdDNcAQ1b6oIrsUn5i1JoV8fKgob2JPG5S6ebkv78OgtXxIIhJKdhmsGYhv_gxUS-9ZvFxCzsJMWWqBtPx8Z6XQ32eAS8c3sIT-HCDUhHrDoqsyyq9xlE4um5fD7CO6gYcaMBwM/w550-h640/IMG-20201121-WA0064.jpg)
Lock Down Relaxed- ಲಾಕ್‌ಡೌನ್‌ನಿಂದ ಕಂಗೆಟ್ಟ ಕರಾವಳಿಗೆ ಸಿಹಿ ಸುದ್ದಿ: ಸಂಜೆ 5ರ ವರೆಗೆ ಸಡಿಲಿಕೆ
ಮಂಗಳೂರು: ಕೊರೋನಾ ಸೋಂಕನ್ನು ನಿಯಂತ್ರಿಸಲು ವಿಧಿಸಲಾದ ಲಾಕ್‌ಡೌನ್‌ನಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಎರಡು ತಿಂಗಳಿನಿಂದ ಕಂಗೆಟ್ಟ ಕರಾವಳಿಗೆ ಇದೊಂದು ಸಿಹಿ ಸುದ್ದಿ.
ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್‌ನ್ನು ಸಂಜೆ 5 ಗಂಟೆಯ ವರೆಗೆ ಸಡಿಲಿಕೆ ಮಾಡಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಎಲ್ಲ ರೀತಿಯ ಅಂಗಡಿ ತೆರೆಯಲು ಅನುಮತಿ ನೀಡಲಾಗಿತ್ತು. ಇದೀಗ ಅದನ್ನು ಸಂಜೆ 5 ಗಂಟೆಯ ವರೆಗೆ ವಿಸ್ತರಿಸಲಾಗಿದೆ.
ಅಲ್ಲದೆ, ಸಂಜೆ 5 ಗಂಟೆಯ ವರೆಗೂ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ವೀಕೆಂಡ್ ಕರ್ಫ್ಯೂವನ್ನು ಮಧ್ಯಾಹ್ನ 2 ಗಂಟೆಯ ವರೆಗೆ ಸಡಿಲಿಕೆ ಮಾಡಲಾಗಿದೆ. ಅಲ್ಲದೆ, ಹಾಲಿನ ಜೊತೆಗೆ ದಿನಸಿ, ಮೀನು ಮಾಂಸ, ತರಕಾರಿ, ಹಣ್ಣು ಹಂಪಲಿನ ಅಂಗಡಿಗಳ ಮಾರಾಟಕ್ಕೆ ಅನುವು ಮಾಡಲಾಗಿದೆ.
ಒಟ್ಟಿನಲ್ಲಿ ಲಾಕ್‌ಡೌನ್‌ನಿಂದ ಕಂಗೆಟ್ಟ ಕರಾವಳಿಗೆ ಸಂಜೆ 5ರ ವರೆಗೆ ಸಡಿಲಿಕೆ ಮಾಡಿರುವುದು ಸಿಹಿ ಸುದ್ದಿಯಾಗಿದೆ.