![Bommai new CM- ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿ: ರಾಜೀನಾಮೆ ಬಳಿಕವೂ ಬಿಎಸ್‌ವೈ ಕೈಮೇಲು Bommai new CM- ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿ: ರಾಜೀನಾಮೆ ಬಳಿಕವೂ ಬಿಎಸ್‌ವೈ ಕೈಮೇಲು](https://blogger.googleusercontent.com/img/b/R29vZ2xl/AVvXsEgUn5bxDHIBKtVIMJ_xs3CN3ycK54xOahKAq0RTWK4BKdHO2TqXRaOyFBDnWKLy2Kjd_ClgQS3WmH-e33LMR6iJOs4GKEv6LrCSHYGDa8wfxFyCnDDxbevJqjWKbpYfkOfv71IPOdamny8/w640-h426/bammai+2.jpg)
Bommai new CM- ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿ: ರಾಜೀನಾಮೆ ಬಳಿಕವೂ ಬಿಎಸ್‌ವೈ ಕೈಮೇಲು
Tuesday, July 27, 2021
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರದ ವೀಕ್ಷಕರು ಬೊಮ್ಮಾಯಿ ಹೆಸರನ್ನು ಪ್ರಸ್ತಾಪಿಸಿದ್ದು, ಅದಕ್ಕೆ ಅವಿರೋಧ ಸಮ್ಮತಿ ವ್ಯಕ್ತವಾಗಿದೆ.
ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದಾರೆ.
ಈ ಆಯ್ಕೆಯ ಮೂಲಕ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರದಲ್ಲಿ ನಿಯಂತ್ರಣ ಮುಂದುವರಿಯಲಿದೆ ಎಂದು ಆಪ್ತ ವಲಯಗಳು ಹೇಳಿವೆ.
ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿದ್ದರು. ಯಾವುದೇ ಕಳಂಕ ಇಲ್ಲದ, ಮಿತಭಾಷಿ ಸಜ್ಜನರಾಗಿರುವ ಬೊಮ್ಮಾಯಿ ರಾಜಕೀಯ ವಲಯದಲ್ಲೂ ತೂಕದ ವ್ಯಕ್ತಿಯಾಗಿದ್ಧಾರೆ.
33 ವರ್ಷಗಳ ಹಿಂದೆ ಅವರ ತಂದೆ ಮುಖ್ಯಮಂತ್ರಿಯಾಗಿದ್ದರು. ಈಗ ಬೊಮ್ಮಯಾಇ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.