-->
New Modified SOP by HC-  ರಾಜ್ಯದ ಆಯ್ದ ಅಧೀನ ನ್ಯಾಯಾಲಯಗಳಿಗೆ ಮಾರ್ಪಡಿಸಿದ ಮಾರ್ಗಸೂಚಿ: ಸೋಮವಾರದಿಂದ ಜಾರಿ

New Modified SOP by HC- ರಾಜ್ಯದ ಆಯ್ದ ಅಧೀನ ನ್ಯಾಯಾಲಯಗಳಿಗೆ ಮಾರ್ಪಡಿಸಿದ ಮಾರ್ಗಸೂಚಿ: ಸೋಮವಾರದಿಂದ ಜಾರಿ


ರಾಜ್ಯ ಹೈಕೋರ್ಟ್ ತನ್ನ ಅಧೀನ ನ್ಯಾಯಾಲಯಗಳ ಕಾರ್ಯಕಲಾಪಗಳ ಬಗ್ಗೆ ಮಾರ್ಪಡಿಸಿದ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮುಂದಿನ ಸೋಮವಾರದಿಂದ, ಅಂದರೆ 12-07-2021ರಿಂದ ಈ ಮಾರ್ಗಸೂಚಿ ಜಾರಿಗೆ ಬರಲಿದೆ.





ಕೋವಿಡ್ ಸೋಂಕಿತರ ಸಂಖ್ಯೆಯ ಕಳೆದ ಐದು ದಿನಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಇರುವ 17 ಜಿಲ್ಲೆಗಳಲ್ಲಿ ಈ ಮಾರ್ಪಡಿಸಿದ ಮಾರ್ಗಸೂಚಿ ಜಾರಿಗೆ ಬರಲಿದೆ.

ಈ 17 ಜಿಲ್ಲೆಗಳೆಂದರೆ



೧) ಬಾಗಲಕೋಟೆ, ೨) ಬಳ್ಳಾರಿ, ೩) ಬೀದರ್, ೪) ಚಾಮರಾಜನಗರ, ೫) ಚಿಕ್ಕಬಳ್ಳಾಪುರ, ೬) ಚಿತ್ರದುರ್ಗ, ೭) ಧಾರವಾಡ, ೮) ಗದಗ, ೯) ಹಾವೇರಿ, ೧೦) ಕಲ್ಬುರ್ಗಿ, ೧೧) ಕೋಲಾರ, ೧೨) ಕೊಪ್ಪಳ, ೧೩) ರಾಯಚೂರು, ೧೪) ರಾಮನಗರ, ೧೫) ಉತ್ತರ ಕನ್ನಡ ಕಾರವಾರ, ೧೬) ವಿಜಯಪುರ, ೧೭) ಯಾದಗೀರ್


ಈ 17 ಜಿಲ್ಲೆಗಳಲ್ಲಿ, ನ್ಯಾಯಾಲಯ ಕಟ್ಟಡ ಪ್ರವೇಶಿಸುವ ವಕೀಲರು ಸೇರಿದಂತೆ ಎಲ್ಲ ವ್ಯಕ್ತಿಗಳು ಥರ್ಮಲ್ ಸ್ಕ್ಯಾನಿಂಗ್‌ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕು. ಕೋವಿಡ್ ಸೋಂಕು ತಗುಲಿರುವ ಅಂಶ ಮೇಲ್ನೋಟಕ್ಕೆ ಕಂಡುಬಂದರೂ ಅವರ ಪ್ರವೇಶವನ್ನು ನಿರಾಕರಿಸಲಾಗುವುದು.



ಈ 17 ಜಿಲ್ಲೆಗಳಲ್ಲಿ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿಯ ಪ್ರವೇಶಕ್ಕೆ ಪತ್ರ್ಯೇಕ ದ್ವಾರವನ್ನು ನಿಯೋಜಿಸಬೇಕು. ಮತ್ತು ಕಕ್ಷಿದಾರರು, ಸಾಕ್ಷ್ಯದಾರರು, ಪೊಲೀಸ್ ಮತ್ತು ಇತರ ಸರ್ಕಾರಿ ಅಧಿಕಾರಿಗಳ ಪ್ರವೇಶಕ್ಕೆ ಇನ್ನೊಂದು ಪ್ರತ್ಯೇಕ ದ್ವಾರ ಮೀಸಲಿಡಬೇಕು. ಎರಡೂ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು.


ಈ 17 ಜಿಲ್ಲೆಗಳಲ್ಲಿ, ನ್ಯಾಯಾಲಯ ಕಟ್ಟಡ ಪ್ರವೇಶಿಸುವ ಎಲ್ಲರೂ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಬೇಕು. ಒಂದು ವೇಳೆ, ಇದರಲ್ಲಿ ಲೋಪ ಯಾ ಚ್ಯುತಿ ಕಂಡುಬಂದರೆ ಅಂಥವರನ್ನುತಕ್ಷಣದಿಂದ ಹೊರ ಹಾಕಲು ಜಿಲ್ಲಾ ಪ್ರಧಾನ ನ್ಯಾಯಾಧೀಶರು ಅಥವಾ ಹಿರಿಯ ನ್ಯಾಯಾಧೀಶರಿಗೆ ಅಧಿಕಾರ ನೀಡಲಾಗಿದೆ.






ಈ 17 ಜಿಲ್ಲೆಗಳಲ್ಲಿ, ನ್ಯಾಯಾಲಯಕ್ಕೆ ಬರುವ ಜನರ ಸಂಖ್ಯೆಯನ್ನು ತಗ್ಗಿಸಲು ಆ ದಿನ ಕರೆಯಲಾಗುವ ಎರಡು ಪ್ರತ್ಯೇಕ ಪಟ್ಟಿಯನ್ನು ಪ್ರಕಟಿಸಲಾಗುವುದು. ಒಂದು ಬೆಳಿಗ್ಗಿನ ಕಲಾಪಕ್ಕೆ ಮತ್ತು ಇನ್ನೊಂದು ಮಧ್ಯಾಹ್ನದ ಕಲಾಪಕ್ಕೆ ಸಂಬಂಧಿಸಿದ್ದು.



ಈ 17 ಜಿಲ್ಲೆಗಳಲ್ಲಿ ಕಕ್ಷಿದಾರರು, ಸಾಕ್ಷ್ಯದಾರರ ಅನಗತ್ಯ ಹಾಜರಾತಿಯನ್ನು ತಡೆಯಲು ಸಂಬಂಧಪಟ್ಟ ವಕೀಲರೇ ನಿರ್ಧರಿಸಬೇಕು. ತೀರಾ ಅಗತ್ಯ ಎಂದು ಕಂಡುಬಂದರೆ ಮಾತ್ರ ಅಂಥಹ ಸಾಕ್ಷ್ಯದಾರರು ಯಾ ಕಕ್ಷಿದಾರರನ್ನು ನ್ಯಾಯಾಲಯದ ಆವರಣಕ್ಕೆ ಕರೆಸಬೇಕು.




ಈ 17 ಜಿಲ್ಲೆಗಳಲ್ಲಿ ನ್ಯಾಯಾಲಯದ ಆವರಣದಲ್ಲಿ ರಿಕ್ರಿಯೇಷನ್ ಚಟುವಟಿಕೆಗಳು, ಸಾಂಸ್ಕೃತಿಕ ಯಾ ಇತರ ತತ್ಸಮಾನ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ವಕೀಲರ ಸಂಘದ ಕಚೇರಿಯನ್ನು ವಾರಕ್ಕೆ ಒಮ್ಮೆ ಸ್ಯಾನಿಟೈಸ್ ಮಾಡಬೇಕು.



ಉಳಿದ 13 ಜಿಲ್ಲೆಗಳಲ್ಲಿ ಜೂನ್ 25ರಂದು ಹೊರಡಿಸಿದ ಮಾರ್ಗಸೂಚಿ ಅನ್ವಯವಾಗಲಿದ್ದು, ಅದೇ ಮಾರ್ಗಸೂಚಿಯ ನಿಯಮಗಳು ಮುಂದುವರಿಯಲಿದೆ.


ಆ 13 ಜಿಲ್ಲೆಗಳೆಂದರೆ

೧) ಬೆಳಗಾವಿ, ೨) ಬೆಂಗಳೂರು ಗ್ರಾಮಾಂತರ, ೩) ಬೆಂಗಳೂರು ನಗರ, ೪) ಚಿಕ್ಕಮಗಳೂರು, ೫) ದಕ್ಷಿಣ ಕನ್ನಡ, ೬) ದಾವಣಗೆರೆ, ೭) ಹಾಸನ, ೮) ಕೊಡಗು, ೯) ಮಂಡ್ಯ, ೧೦) ಮೈಸೂರು, ೧೧) ಶಿವಮೊಗ್ಗ, ೧೨) ತುಮಕೂರು, ೧೩) ಉಡುಪಿ



ಈ 13 ಜಿಲ್ಲೆಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ದಾಖಲು ಮಾಡುವ ಗರಿಷ್ಟ ಸಂಖ್ಯೆ 5ರ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಕೋರ್ಟ್ ಕಲಾಪದ ಎರಡೂ ಅಧಿವೇಶನದಲ್ಲೂ ಸಾಕ್ಷಿದಾರರ ಸಾಕ್ಷ್ಯ ದಾಖಲು ಮಾಡಬಹುದು.



ಕೋರ್ಟ್ ದೈನಂದಿನ ಕಲಾಪಗಳಲ್ಲಿ ಗರಿಷ್ಟ 40 ಪ್ರಕರಣಗಳ ನ್ಯಾಯ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮುಂಚೆ, ಬೆಳಿಗ್ಗೆ ಮತ್ತು ಮಧ್ಯಾಹ್ನದ ಕಲಾಪಗಳಿಗೆ ತಲಾ 15 ಪ್ರಕರಣಗಳಂತೆ ದಿನಕ್ಕೆ 30 ಪ್ರಕರಣದ ನ್ಯಾಯವಿಚಾರಣೆಗೆ ಅವಕಾಶ ನೀಡಲಾಗಿತ್ತು.



ಈ 13 ಜಿಲ್ಲೆಗಳಲ್ಲಿ ವಕೀಲರ ಸಂಘದ ಕಚೇರಿ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ, ಟೈಪಿಸ್ಟ್‌ಗಳು, ಕ್ಯಾಂಟೀನ್ ಮತ್ತು ಇತರ ಸಿಬ್ಬಂದಿಯ ಕೆಲಸ/ಸೇವೆಗಳಿಗೆ ಅನುವು ಮಾಡಿಕೊಡಲಿದೆ. ಆದರೆ, ಈ ಎಲ್ಲ ಸಿಬ್ಬಂದಿ ಲಸಿಕೆ ಪಡೆದಿರಬೇಕು ಎಂಬುದನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಖಾತ್ರಿಪಡಿಸಬೇಕು.




ಎಲ್ಲ 30 ಜಿಲ್ಲಾ ನ್ಯಾಯಾಲಯಗಳಿಗೆ ಅನ್ವಯವಾಗುವ ಸಾಮಾನ್ಯ ನಿರ್ಬಂಧ

ಮುಂದಿನ ಆದೇಶದ ವರೆಗೆ, ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಮುಖ್ಯ ಕೋರ್ಟ್ ಕಟ್ಟಡದ ಹೊರಗೆ ಪ್ರತ್ಯೇಕ ಕೌಂಟರ್‌ಗಳನ್ನು ಭೌತಿಕ ಕೇಸ್‌ ಪೈಲಿಂಗ್‌ಗೆ ತೆರೆಯಬೇಕು.



ಅಧಿಕೃತ ಕೋರ್ಟ್‌ ಕ್ಯಾಂಟೀನ್ ಸಿಬ್ಬಂದಿ ಲಸಿಕೆ ಪಡೆದಿರುವುದನ್ನು ಖಾತ್ರಿಪಡಿಸಬೇಕು.

Ads on article

Advertise in articles 1

advertising articles 2

Advertise under the article