![Notary appointed- ಮಂಗಳೂರು ಕಂದಾಯ ತಾಲೂಕಿನ ನೋಟರಿಯಾಗಿ ವಿಜಯ್ ಕುಮಾರ್ ನೇಮಕ Notary appointed- ಮಂಗಳೂರು ಕಂದಾಯ ತಾಲೂಕಿನ ನೋಟರಿಯಾಗಿ ವಿಜಯ್ ಕುಮಾರ್ ನೇಮಕ](https://blogger.googleusercontent.com/img/b/R29vZ2xl/AVvXsEimv5gfCUPlPJ-ad_KNESrsjDiXQRqOZPe1sDCPYegiTYvDbT_lGwmvyjspxW5NghzL00SyifsQfcoNuhtlXixk-zZyzXbs8LD5auYrFv6Ym4AsPO4hB7OGvAHs6-BPOSajrlaz8gfck1U/w400-h400/Screenshot_20210727_000723.png)
Notary appointed- ಮಂಗಳೂರು ಕಂದಾಯ ತಾಲೂಕಿನ ನೋಟರಿಯಾಗಿ ವಿಜಯ್ ಕುಮಾರ್ ನೇಮಕ
Wednesday, July 28, 2021
ಮಂಗಳೂರಿನ ವಕೀಲರಾದ ವಿಜಯ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಂದಾಯ ತಾಲೂಕಿನ ನೋಟರಿ ಪಬ್ಲಿಕ್ ಆಗಿ ನೇಮಕ ಮಾಡಲಾಗಿದೆ.
ರಾಜ್ಯ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಜಿ. ಮಂಜುಳಾ ಅವರು ಈ ಆದೇಶ ಹೊರಡಿಸಿದ್ದು, ಮುಂದಿನ ಐದು ವರ್ಷಗಳ ವರೆಗೆ ಅವರನ್ನು ನೋಟರಿಯಾಗಿ ನೇಮಿಸಲಾಗಿದೆ.
ಮಂಗಳೂರಿನ ನ್ಯಾಯಾಂಗ ಇಲಾಖೆಯ ನೌಕರರಾಗಿದ್ದ ವಿಜಯ್ ಕುಮಾರ್, ತಮ್ಮ ವೃತ್ತಿಗೆ ಸ್ವಯಂ ನಿವೃತ್ತಿ ನೀಡಿ ಕಳೆದ ಒಂದೂವರೆ ದಶಕದಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಜಯ್ ಕುಮಾರ್ ಮಂಗಳೂರಿನ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜ್‌ನ ಹಳೆ ವಿದ್ಯಾರ್ಥಿಯೂ ಆಗಿದ್ದಾರೆ.