![SBI problem- ಗ್ರಾಹಕರಿಗೆ ಕೈಕೊಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಮಧ್ಯಾಹ್ನದ ಬಳಿಕ ದೇಶಾದ್ಯಂತ ವ್ಯವಹಾರ ಸ್ಥಗಿತ? SBI problem- ಗ್ರಾಹಕರಿಗೆ ಕೈಕೊಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಮಧ್ಯಾಹ್ನದ ಬಳಿಕ ದೇಶಾದ್ಯಂತ ವ್ಯವಹಾರ ಸ್ಥಗಿತ?](https://blogger.googleusercontent.com/img/b/R29vZ2xl/AVvXsEgIZPZn1VLRYzahIYJhFdsRaghO9_Ni5Zk0kDIPJq_Prpam_QTdaCFBjYnvyQPVTDnQ0LUoTobeQyAdaXHIFkArbzCYuMYZysGaCXPaVo_x94lcrBg9ducpifIh8syLc4lxVgzcYjtUUtY/w640-h358/SBI+Imges.jpg)
SBI problem- ಗ್ರಾಹಕರಿಗೆ ಕೈಕೊಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಮಧ್ಯಾಹ್ನದ ಬಳಿಕ ದೇಶಾದ್ಯಂತ ವ್ಯವಹಾರ ಸ್ಥಗಿತ?
ದೇಶದ ಪ್ರತಿಷ್ಠಿತ ಹಾಗೂ ಸರ್ಕಾರಿ ಸ್ವಾಮ್ಯದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಅಪರಾಹ್ನ 3-30ರ ಬಳಿಕ ತನ್ನ ಸೇವೆಯಲ್ಲಿ ಭಾರೀ ವ್ಯತ್ಯಯವನ್ನು ದಾಖಲಿಸಿದೆ.
ದೇಶದ ಎಲ್ಲ ಶಾಖೆಯ ಕೌಂಟರ್ ಹಣಕಾಸಿನ ವ್ಯವಹಾರಗಳು ಸ್ಥಗಿತಗೊಂಡಿತ್ತು ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಗ್ರಾಹಕರು ಶಾಖೆಗಳಲ್ಲಿ ಹಣ ಜಮೆ ಮತ್ತು ಚೆಕ್ ಮೂಲಕ ಹಣ ತೆಗೆಯಲು ಮುಂದಾದಾಗ ಇದು ಗಮನಕ್ಕೆ ಬಂತು. ಇದು ಕೇವಲ ಈ ಶಾಖೆಯಲ್ಲಿ ಮಾತ್ರವಲ್ಲ, ಇಡೀ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲೂ ಇದೇ ಪರಿಸ್ತಿತಿ ಎಂಬುದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯೇ ಖಚಿತಪಡಿಸಿದ್ದಾರೆ.
ಈ ವ್ಯತ್ಯಯದಿಂದ ಬ್ಯಾಂಕ್ ಗ್ರಾಹಕರು ಮತ್ತು ಸಾರ್ವಜನಿಕರು ಇನ್ನಿಲ್ಲದ ಪರದಾಟ, ಸಂಕಷ್ಟಕ್ಕೆ ಈಡಾಗಿದ್ದಾರೆ.
ವಾಣಿಜ್ಯಾತ್ಮಕ ಹಣಕಾಸು ವರ್ಗಾವಣೆ ಸೇರಿದಂತೆ ಹಣಕಾಸು ವ್ಯವಹಾರಗಳು ಮತ್ತು ಸರ್ಕಾರಿ ಖಜಾನೆಗೆ ಹಣ ಜಮೆ ಮಾಡಲು ಗ್ರಾಹಕರು ಸಾಧ್ಯವಾಗಲಿಲ್ಲ. ಕೆಲವರಂತೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.
ಬಯೋಮೀಟರ್ ಸಮಸ್ಯೆಯಿಂದ ಈ ಅವ್ಯವಸ್ಥೆ ಆಗಿದೆ ಎಂಬುದಾಗಿ ಎಸ್‌ಬಿಐ ಸಿಬ್ಬಂದಿ ತಮ್ಮ ಅವ್ಯವಸ್ಥೆಗೆ ದೂರಿದ್ದಾರೆ.