
Shamitha trolled- ಬೆಳಗ್ಗೆ ಅಕ್ಕನ ಯೋಗ ಭಂಗಿ, ಭಾವನಿಂದ ರಾತ್ರಿಯ ಭಂಗಿ -ಶಿಲ್ಪಾ ಶೆಟ್ಟಿ ತಂಗಿ ವಿರುದ್ಧ ನೆಟ್ಟಿಗರ ಟ್ರೋಲ್
Sunday, July 25, 2021
ಅಶ್ಲೀಲ ವಿಡಿಯೋ ತಯಾರಿಕೆಗೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ ಕುಂದ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ಹಂಗಾಮಾ 2 ಚಿತ್ರದ ಒಟಿಟಿ ಬಿಡುಗಡೆಯ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಶಿಲ್ಪಾ ಶೆಟ್ಟಿ, ನನ್ನ ಪತಿ “ಅಮಾಯಕ” ಎಂದು ಹೇಳಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ ತನ್ನ ಅಕ್ಕನನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಹಂಗಾಮಾ 2 ರಿಲೀಸ್ ಗೆ ಶಮಿತಾ ಶೆಟ್ಟಿ ತನ್ನ ಅಕ್ಕನಿಗೆ ಇನ್ಸ್ಟಾಗ್ರಾಮ್ ನಲ್ಲಿ ಶುಭಕೋರಿದ್ದು, '14 ವರ್ಷಗಳ ಬಳಿಕ ನಿನ್ನ ನಟನೆಯ ಹಂಗಾಮ 2 ರಿಲೀಸ್ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಿ ಎನ್ನೋದು ಗೊತ್ತು. ನಾನು ನಿನ್ನ ಜೊತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಿ. ಪ್ರತಿ ಬಾರಿಯೂ ಮತ್ತಷ್ಟು ಗಟ್ಟಿ ಆಗುತ್ತಿದ್ದಿ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮ 2 ತಂಡಕ್ಕೆ ಆಲ್ ದ ಬೆಸ್ಟ್' ಎಂದು ಪೋಸ್ಟ್ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿಯನ್ನು ಶಮಿತಾ ಶೆಟ್ಟಿ ಬೆಂಬಲಿಸುತ್ತಿದ್ದಂತೆ ಅವರ ಪೋಸ್ಟ್ ಟ್ರೋಲ್ ಆಗಿದೆ. ಶಮಿತಾ ಶೆಟ್ಟಿ ಪೋಸ್ಟ್ ಗೆ ವ್ಯಕ್ತಿಯೋರ್ವ ಕಮೆಂಟ್ ಮಾಡಿದ್ದು, 'ನಿಮ್ಮ ಅಕ್ಕ ಬೆಳಗ್ಗೆ ಯೋಗದ ಭಂಗಿ ಕಲಿಸುತ್ತಾರೆ. ನಿಮ್ಮ ಭಾವ ರಾತ್ರಿ ಯೋಗದ ಭಂಗಿಯನ್ನು ಕಲಿಸಿಕೊಡುತ್ತಾರೆ' ಎಂದು ಕಾಲೆಳೆದಿದ್ದಾರೆ.