-->
Fuel Rate Hike- “ಸೈಕಲ್ ತುಳಿಯುವುದು ಉತ್ತಮ” ಎಂದ ಸನ್ನಿಲಿಯೋನ್: ತೈಲ ಬೆಲೆ ಏರಿಕೆ ಸೂಚ್ಯ ಪ್ರತಿಭಟನೆ?

Fuel Rate Hike- “ಸೈಕಲ್ ತುಳಿಯುವುದು ಉತ್ತಮ” ಎಂದ ಸನ್ನಿಲಿಯೋನ್: ತೈಲ ಬೆಲೆ ಏರಿಕೆ ಸೂಚ್ಯ ಪ್ರತಿಭಟನೆ?



“ಸೈಕಲ್ ತುಳಿಯುವುದು ಉತ್ತಮ” ಎಂದ ಸನ್ನಿಲಿಯೋನ್


ತೈಲ ಬೆಲೆ ಏರಿಕೆ ಸೂಚ್ಯ ಪ್ರತಿಭಟನೆ?





ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ವಿನೂತನವಾಗಿ ಧ್ವನಿಯೆತ್ತಿದ್ದಾರೆ. ತಮ್ಮ ಇನ್ಸ್ಟಗ್ರಾಂನಲ್ಲಿ ಸೈಕಲ್ ಜೊತೆ ಇರುವ ತಮ್ಮ ಎರಡು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪೆಟ್ರೋಲ್ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿ ನಯವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.


ದೇಶದಲ್ಲಿ ಇಂಧನ ಬೆಲೆ ನೂರರ ಗಡಿ ದಾಟಿದಾಗ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಅದಕ್ಕಾಗಿ ಸೈಕಲ್ ತುಳಿಯುವುದು ಉತ್ತಮ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಈ ಪೋಸ್ಟ್ ಜೊತೆಗೆ ತಮ್ಮ ಹೊಸ ಸೈಕಲ್ ನ ಫೋಟೋವನ್ನು ಹಂಚಿಕೊಂಡಿದ್ದಾರೆ.


ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಗಳ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಲವಾರು ಗಣ್ಯರು ಬೆಲೆ ಏರಿಕೆ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ.


ಸಾಮಾಜಿಕ ಸೇವೆಯಲ್ಲಿ ಯಾವಾಗಲೂ ಸುದ್ದಿಯಲ್ಲಿರುವ ಸನ್ನಿ ಲಿಯೋನ್ ಅವರು ಇದೀಗ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ತಮ್ಮ ಪೋಸ್ಟ್ ಮೂಲಕ ಸೂಚ್ಯವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article