Tweet politics- ಜೆಡಿಎಸ್ ಬಲಿಷ್ಟ ಪಕ್ಷ: ರಾಜಕೀಯ ತಲ್ಲಣ ಸೃಷ್ಟಿಸಿದ ಅನಂತ್ ಪುತ್ರಿಯ ಟ್ವೀಟ್
"ಕರ್ನಾಟಕ ರಾಜಕೀಯ ಏಕೆ ಅತಿ ಆಸಕ್ತಿದಾಯಕವಾಗಿದೆ... ಏಕೆಂದರೆ, ಜೆಡಿಎಸ್ ಈಗಲೂ ಬಲಿಷ್ಟ ರಾಜಕೀಯ ಶಕ್ತಿಯಾಗಿದೆ..." ಈ ಟ್ವೀಟ್ ರಾಜ್ಯ ರಾಜಕೀಯದಲ್ಲಿ ಈಗ ಭಾರೀ ಚರ್ಚೆಯ ವಸ್ತು. ಈ ಟ್ವೀಟ್ ಮಾಡಿದ್ದು ಹಿರಿಯ ಬಿಜೆಪಿ ನಾಯಕ ದಿವಂಗತ ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತ್ ಕುಮಾರ್.
ತಾಯಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ವಿಜೇತಾ ಬೇಸರಗೊಂಡಿರಬಹುದೇ... ಈ ಪ್ರಶ್ನೆಗೂ ಅವರು ಇನ್ನೊಂದು ಟ್ವೀಟ್‌ನಲ್ಲಿ ಉತ್ತರಿಸಿದ್ದಾರೆ.
ಶಶಾಂಕ್ ಎಂಬವರ ಟ್ವೀಟ್‌ಗೆ ನೀಡಿದ ಉತ್ತರ, ತನ್ನ ತಾಯಿ ತೇಜಸ್ವಿನಿ ತೆನೆ ಹೊತ್ತ ಮಹಿಳೆಯಾಗಲಿದ್ದಾರೆಯೇ ಎಂಬುದನ್ನು ಸೂಚ್ಯ ಹೇಳಿದ್ದಾರೆ.
ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಕಾಣಬಹುದು ಎಂಬ ಶಶಂಕಾ ಟ್ವೀಟ್‌ಗೆ ಅಭಿಮಾನಿಯೊಬ್ಬರ ಪ್ರತಿಕ್ರಿಯೆ ಹೀಗಿತ್ತು. ಒಂದು ವೇಳೆ ಜೆಡಿಎಸ್ ಕೆಲವು ಕುಟುಂಬ ರಾಜಕಾರಣದಿಂದ ಹೊರಬಂದರೆ, ತೇಜಸ್ವಿನಿ ಅನಂತ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಸ್ಥಿತಿ ಬದಲಾಗಬಹುದು ಎಂದು ಹೇಳಿದ್ಧಾರೆ...
ಈ ಟ್ವೀಟ್ ನೋಡಿ ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಕುಣಿದಾಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೆಡಿಎಸ್‌ಗೆ ಮುಕ್ತ ಆಹ್ವಾನವನ್ನೂ ನೀಡಿದ್ಧಾರೆ.