![Village accountant clerck suicide- ಕೊಣಾಜೆ: ಗ್ರಾಮ ಸಹಾಯಕ ನೇಣು ಬಿಗಿದು ಆತ್ಮಹತ್ಯೆ Village accountant clerck suicide- ಕೊಣಾಜೆ: ಗ್ರಾಮ ಸಹಾಯಕ ನೇಣು ಬಿಗಿದು ಆತ್ಮಹತ್ಯೆ](https://blogger.googleusercontent.com/img/b/R29vZ2xl/AVvXsEh42wFlHPjX2lCVczZXu5LS55wqweyuzxN80lgHI3OFsrBKNp757lEpKLNSYw5Pkyo1PRZWBv3O2nZG3B04uDQNUKeieD_WVN5c2HWs8H3nd-lTljHikSsfqPALE_d5xqeos-syxCr0R1A/w640-h462/Nithin+Shetty+2.jpg)
Village accountant clerck suicide- ಕೊಣಾಜೆ: ಗ್ರಾಮ ಸಹಾಯಕ ನೇಣು ಬಿಗಿದು ಆತ್ಮಹತ್ಯೆ
Thursday, July 29, 2021
ಮಂಗಳೂರು ಹೊರವಲಯದಲ್ಲಿ ಇರುವ ಅಂಬ್ಲಮೊಗರು ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಸಹಾಯಕರ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಯುವಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ಧಾರೆ.
ಅಂಬ್ಲಮೊಗರು ಪಡ್ಯಾರ ಗುತ್ತಿನ ಮನೆಯ ನಿತಿನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಕೆಲವು ವರ್ಷಗಳಿಂದ ನಿತಿನ್ ಅಂಬ್ಲಮೊಗರು ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಕರಣಿಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಬೆಳಿಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುರ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಕಚೇರಿಗೆ ಬಂದಿದ್ದರು.
ಬಳಿಕ ಮನೆಗೆ ಮರಳಿದ ನಿತಿನ್ ತನ್ನ ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು.
ಎಷ್ಟು ಹೊತ್ತಾರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಅವರ ತಾಯಿ ರೂಮಿನೊಳಗೆ ಹೋದಾಗ ನಿತಿನ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಕೊಣಾಜೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.