Yenapoya- ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದು ಮಹಾ ಕಾರ್ಯ- ಎನ್. ಶಶಿಕುಮಾರ್
ಯೇನೆಪೊಯ ಮೊಯ್ದಿನ್ ಕುಂಞ ಮೆಮೋರಿಯಲ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಘಟಕವಾದ ಯೇನೆಪೊಯ ಫೌಂಡೇಶನ್ ಹಾಗೂ ಯೇನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ 2005 ರಿಂದ ಪ್ರತಿ ವರ್ಷ ವಿತರಿಸಲಾಗುತ್ತಿದೆ.
ಈ ಬಾರಿಯ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಸಮಾರಂಭವು ದಿನಾಂಕ 09.7.2021 ಶುಕ್ರವಾರದಂದು ಬೆಳಗ್ಗೆ ಗಂಟೆ 10.00ಕ್ಕೆ ಆನ್ ಲೈನ್ ಮೂಲಕ ಯೆನೆಪೋಯ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು.
ಈ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಂಗಳೂರು ನಗರ ಪೋಲೀಸ್ ಆಯುಕ್ತ ಎನ್. ಶಶಿಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಅವರು ಸಮಾಜದಲ್ಲಿ ಆರ್ಥಿಕವಾಗಿ ಆಶಕ್ತರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪುರಸ್ಕರಿಸಿ ವಿದ್ಯಾ ರ್ಜನೆಗೆ ನೆರವಾಗುವುದು ನಿಜವಾಗಿಯು ಒಂದು ಒಳ್ಳೆಯ ಸೇವೆಯಾಗಿದೆ ಅಬಿಪ್ರಾಯ ಪಟ್ಟರು.
ಯೇನೆಪೋಯ ವಿಧ್ಯಾಸಂಸ್ಥೆಗಳು ಕೂಡ ಸಮಾಜಕ್ಕೆ ಸೇವೆ ನೀಡುತಿರುವ ಸಂಸ್ಥೆಗಳಲ್ಲಿ ಗುರುತಿಸಿಕೂಂಡಿರುವುದು ಶ್ಲಾಘನಾರ್ಹ ವಿಚಾರವಾಗಿದೆ. ಯೇನೆಪೋಯ ವಿಶ್ವ ವಿದ್ಯಾನಿಲಯದ ಇಂತಹ ಸಾಧನೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
2019-20 ಸಾಲಿನಲ್ಲಿ ಈ ಬಾರಿ ಪ್ರತಿಭಾ ಪುರಸ್ಕಾರಕ್ಕೆ ಒಟ್ಟು 1551 ಕರ್ನಾಟಕದ ದ .ಕ. , ಉಡುಪಿ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಸಂಗ ಮಾಡಿದಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವಿಕರಿಸಲಾಗಿತ್ತು.
ಈ ಪ್ರಶಸ್ತಿಯು ರೂ. 3,000 ದಿಂದ 5,000ದ ವರೆಗಿನ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳ ಗೊಂಡಿದೆ. ಈ ಪುರಸ್ಕಾರವನ್ನು ಈ ವರ್ಷ 447 ವಿದ್ಯಾರ್ಥಿಗಳು ಪಡೆದಿದ್ದಾರೆ ಹಾಗೂ ಈ ವರ್ಷದ ಪುರಸ್ಕಾರಕ್ಕೆ ರೂ. 15.49 ಲಕ್ಷವನ್ನು ವೆಚ್ಚ ಮಾಡಲಾಗಿದೆ.
ಇದರ ಜತೆಗೆ ಯೇನೆಪೋಯ ಫೌಂಡೇಶನ್ ಯೇನೆಪೋಯ ಸಮೂಹ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಪ್ರತಿಭಾವಂತ ಮಕ್ಕಳಿಗೆ ನಿಗದಿಪಡಿಸಿದ ಶೈಕ್ಷಣಿಕ ಕೋರ್ಸ್‍ಗಳ ಅಂತಿಮ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದರೆ ಅಂತಹವರಿಗೆ ಕೂಡಾ ಈ ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು.
ಇದಲ್ಲದೆ 2019-20 ಸಾಲಿನಲ್ಲಿ ವಿಶ್ವವಿದ್ಯಾನಿಲಯದ 278 ವಿದ್ಯಾರ್ಥಿಗಳಿಗೆ 2,88,60,450 ರೂಪಾಯಿ ಮೊತ್ತದ ಸ್ಕಾಲರ್ ಶಿಪ್ ಯೇನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಪರವಾಗಿ ನೀಡಲಾಗಿದೆ.
ಯೇನೆಪೋಯ ಫೌಂಡೇಶನ್ ಇದರ ಅಧ್ಯಕ್ಷರಾದ ಯೇನೆಪೋಯ ಮೊಹಮ್ಮದ್ ಕುಂಞ ಗೌರಾವಾನ್ವಿತ ಅತಿಥಿಗಳಾಗಿದ್ದರು.
ಯೇನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಕುಲಾಧಿಪತಿಗಳಾದ ವೈ. ಅಬ್ದುಲ್ಲ ಕುಂಞ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಯೇನೆಪೋಯ(ಪರಿಗಣಿಸಲ್ಪಟ್ಟವಿಶ್ವವಿದ್ಯಾನಿಲಯ) ಗೌರವಾನ್ವಿತ ಉಪಕುಲಪತಿಗಳಾದ ಡಾ. ಎಮ್ . ವಿಜಯಕುಮಾರ್ ಸ್ವಾಗತಿಸಿದರು.ಯೇನೆಪೋಯ ಅಬ್ದುಲ್ಲ ಜಾವೇದ್ ವಂದನಾರ್ಪನಗೈದರು.ಡಾ. ರೊಶೇಲ್ ಟೆಲ್ಲಿಸ್ ಮತ್ತು ಡಾ. ಮಲ್ಲಿಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.