-->
Zika 14 case confirmed- ಡೆಡ್ಲಿ ಝಿಕಾ ವೈರಸ್ ಪ್ರವೇಶ: 14 ಪ್ರಕರಣ ದೃಢ, ಕೇರಳ ತಲ್ಲಣ

Zika 14 case confirmed- ಡೆಡ್ಲಿ ಝಿಕಾ ವೈರಸ್ ಪ್ರವೇಶ: 14 ಪ್ರಕರಣ ದೃಢ, ಕೇರಳ ತಲ್ಲಣ






ಡೆಡ್ಲಿ ಕೊರೊನಾ ವೈರಸ್ ದೇಶದ ಜನರನ್ನು ತಲ್ಲಣಗೊಳಿಸಿದ ಬೆನ್ನಲ್ಲೇ ಝಿಕಾ ಎಂಬ ವೈರಸ್ ದಾಂಗುಡಿ ಇಟ್ಟಿದೆ. ಕೇರಳಕ್ಕೆ ಈ ವೈರಸ್ ಪ್ರವೇಶ ಮಾಡಿದ್ದು, ಇದುವರೆಗೆ 14 ಮಂದಿಯಲ್ಲಿ ರೋಗ ಲಕ್ಷಣಗಳು ಪತ್ತೆಯಾಗಿದೆ.



'ಈಡಿಸ್' ಎಂಬ ಅಪಾಯಕಾರಿ ಸೊಳ್ಳೆಯಿಂದ ಝಿಕಾ ವೈರಸ್ ಸೋಂಕು ಹರಡುತ್ತದೆ. ಈ ವೈರಸ್ ತಗುಲಿದ ಮೂರನೇ ದಿನದಿಂದ 12 ದಿನಗಳ ಒಳಗೆ ಝಿಕಾ ರೋಗ ಲಕ್ಷಣಗಳು ಕಂಡುಬರುತ್ತದೆ.



ಈ ಸೋಂಕು ತಲೆಯ ಗಾತ್ರ ಕುಗ್ಗಿಸಿ ಮೆದುಳಿನ ಬೆಳವಣಿಗೆಯನ್ನು ಕ್ಷೀಣಗೊಳಿಸುತ್ತದೆ. ಗರ್ಭಿಣಿಯರಿಗೆ ಝಿಕಾ ವೈರಸ್ ತಗುಲಿದರೆ ಮಗುವಿಗೆ ಬಾಧಿಸುತ್ತದೆ. ಗರ್ಭಿಣಿಯರಿಗೆ ಮಗುವಿನ ಅಕಾಲಿಕ ಜನನ ಅಥವಾ ಗರ್ಭಪಾತವಾಗಬಹುದು ಎನ್ನಲಾಗಿದೆ.



ಝಿಕಾ ವ್ಯಾಪಕವಾಗಿ ಹರಡಿದರೆ ಕೊರೊನಾದಂತೆ ನಿಯಂತ್ರಣ ಮಾಡಲು ಹರಸಾಹಸ ಪಡಬೇಕಾಗುತ್ತದೆ. 1947ರಲ್ಲಿ ಉಗಾಂಡ ದೇಶದಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿತ್ತು ಎನ್ನಲಾಗಿದೆ. 



ಆ ನಂತರ ವಿಶ್ವದ 86 ದೇಶಗಳಲ್ಲಿ ಹರಡಿತು. ಬ್ರಜಿಲ್ ನಲ್ಲಿ ಝಿಕಾ ವೈರಸ್ ದಾಳಿ ಇಟ್ಟಾಗ ನಿಯಂತ್ರಣಾ ವಿಧಾನವನ್ನು ಅನುಷ್ಠಾನಗೊಳಿಸಲು ಸೈನ್ಯವನ್ನೆ ನಿಯೋಜನೆ ಮಾಡಲಾಗಿತ್ತು.



ಸದ್ಯ ಕೇರಳದಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ಸೋಂಕಿತರ ಸ್ವಾಬ್ ಮಾದರಿಯನ್ನು ಪುಣೆಯ ಲ್ಯಾಬ್ ಗೆ ಕಳುಹಿಸಲಾಗಿದ್ದು, 14 ಪ್ರಕರಣಗಳು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದು, ತಕ್ಷಣ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. 

Ads on article

Advertise in articles 1

advertising articles 2

Advertise under the article