-->
3 dose Vaccine for above 12- ಗುಡ್ ನ್ಯೂಸ್- ಮಕ್ಕಳಿಗೂ ಬಂದಿದೆ ಲಸಿಕೆ: 12 ಮೇಲ್ಪಟ್ಟವರಿಗೆ ಜೈಡಸ್ ಕ್ಯಾಡಿಲಾ ಲಸಿಕೆ

3 dose Vaccine for above 12- ಗುಡ್ ನ್ಯೂಸ್- ಮಕ್ಕಳಿಗೂ ಬಂದಿದೆ ಲಸಿಕೆ: 12 ಮೇಲ್ಪಟ್ಟವರಿಗೆ ಜೈಡಸ್ ಕ್ಯಾಡಿಲಾ ಲಸಿಕೆ



ದೇಶಾದ್ಯಂತ ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ಮುಂದುವರಿದಿರುವಂತೆಯೇ, ಭಾರತದ ವೈದ್ಯಕೀಯ ನಿಯಂತ್ರಣ ಮಂಡಳಿ, 12 ಮೇಲ್ಪಟ್ಟವರಿಗೆ ನೀಡಬಹುದಾದ ಲಸಿಕೆಗೆ ಅನುಮತಿ ನೀಡಿದೆ.



ಮುಂಚೂಣಿ ಔಷಧಿ ತಯಾರಕ ಸಂಸ್ಥೆಗಳಾದ ಜೈಡಸ್ ಮತ್ತು ಕ್ಯಾಡಿಲಾ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಇದು ಮೂರು ಡೋಸ್‌ಗಳ ಪ್ಯಾಕೇಜ್ ಆಗಿರುತ್ತದೆ.

ಶೇ 66.6 ಶಕ್ತ ದರ (ಎಫೀಶಿಯನ್ಸಿ ರೇಟ್) ಹೊಂದಿರುವ ಈ ಜೈಕೋವ್-ಡಿ ಎಂಬ ಲಸಿಕೆಯ ಬಳಕೆಗೆ ಕ್ಯಾಡಿಲಾ ಹೆಲ್ತ್ ಕೇರ್ ಜುಲೈ 1ಕ್ಕೆ ಅನುಮತಿ ಕೋರಿತ್ತು.



ಈ ಲಸಿಕೆ ರೂಪಾಂತರಿ ಕೊರೋನಾ ಸೋಂಕು ಹಾಗೂ ಡೆಲ್ಟಾ ಪ್ಲಸ್‌ಗೂ ಪರಿಣಾಮಕಾರಿ ಔಷಧಿ ಎಂದು ಹೇಳಲಾಗಿದೆ.

12 ವರ್ಷ ಮೇಲ್ಪಟ್ಟವರಿಗೆ ಮೂರು ಡೋಸ್‌ಗಳಲ್ಲಿ ಈ ಲಸಿಕೆಯನ್ನು ನೀಡಬಹುದಾಗಿದೆ ಎಂದು ಭಾರತೀಯ ಔಷಧ ನಿಯಂತ್ರಕ ಮಂಡಳಿ(ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ) ಹೇಳಿದೆ.

Ads on article

Advertise in articles 1

advertising articles 2

Advertise under the article