
Alvas News- ಆಳ್ವಾಸ್ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಹೋಮಿಯೋಪತಿ ಅಧ್ಯಯನ ಮಂಡಳಿಗೆ ಆಯ್ಕೆ
Saturday, August 28, 2021
ಮೂಡುಬಿದಿರೆ: ಪ್ರತಿಷ್ಠಿತ ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜ್‌ನ ಆರ್ಗೆನಾನ್ ಮತ್ತು ಹೋಮಿಯೋಪತಿಕ್ ಫಿಲೋಸಫಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪ್ರಜ್ಞ ಆಳ್ವ ಅವರು ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಹೋಮೀಯೋಪತಿ ಅಧ್ಯಯನ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ವಿವಿಯ 163ನೇ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಜ್ಞಾ ಅವರು ಮುಂದಿನ ಮೂರು ವರ್ಷಗಳ ಕಾಲ ಮಂಡಳಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಥಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ. ರೋಶನ್ ಪಿಂಟೋ ಡಾ. ಪ್ರಜ್ಞಾ ಅವರನ್ನು ಅಭಿನಂದಿಸಿದ್ದಾರೆ.