Corona Update- 400 ಹೊಸ ಪ್ರಕರಣಗಳ ಗಡಿ ದಾಟಿದ ಬೆಂಗಳೂರು ನಗರ, ದ.ಕ.: ಪಾಸಿಟಿವಿಟಿ ದರದಲ್ಲೂ ಏರಿಕೆ!
ಬೇರಾವ ಜಿಲ್ಲೆಗಳಲ್ಲೂ ಹೊಸ ಕೋವಿಡ್ ಪ್ರಕರಣ 200ನ್ನೂ ದಾಟಿಲ್ಲ. ಆದರೆ, ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡದಲ್ಲಿ ಈ ಸಂಖ್ಯೆ 400 ಗಡಿ ದಾಟಿದ್ದು, ದಕ್ಷಿಣ ಕನ್ನಡದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 5ರ ಹತ್ತಿರಕ್ಕೆ ಬಂದಿದೆ.
ರಾಜ್ಯದಲ್ಲಿ ಶುಕ್ರವಾರ 1805 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 36 ಸಾವುಗಳು ಸಂಭವಿಸಿವೆ. 852 ಪ್ರಕರಣಗಳನ್ನು ಬೆಂಗಳೂರು ನಗರ (441) ಮತ್ತು ದಕ್ಷಿಣ ಕನ್ನಡ (411) ಹಂಚಿಕೊಂಡಿವೆ.
ರಾಜ್ಯದಲ್ಲಿ ಗರಿಷ್ಟ ಸಾವು ಬೆಂಗಳೂರು ನಗರದಲ್ಲಿ 7 ಸಾವು ಸಂಭವಿಸಿದೆ. ಎರಡನೇ ಸ್ಥಾನ ಮೈಸೂರು ಪಡೆದುಕೊಂಡಿದ್ದು, ಅಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ, ಹಾಸನ ಮತ್ತು ಮಂಡ್ಯದಲ್ಲಿ ತಲಾ 3 ಸಾವುಗಳು ಸಂಭವಿಸಿದೆ.
ಉಡುಪಿ 153 ಮತ್ತು ಹಾಸನ 103 ನಂತರದ ಸ್ಥಾನ ಗಳಿಸಿವೆ. ಪಟ್ಟಿಯಲ್ಲಿ ಮೈಸೂರು 90 ಪ್ರಕರಣಗಳೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದೆ.
ಬಾಗಲಕೋಟೆ, ಗದಗ ಮತ್ತು ಯಾದಗೀರ್‌ನಲ್ಲಿ ಶೂನ್ಯ ದಾಖಲೆಯೊಂದಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.
ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 1.11ರಷ್ಟಿದ್ದರೆ, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ 4.42ರಷ್ಟಿದೆ. ಈ ಅಂಶಗಳು ಕರಾವಳಿ ಜಿಲ್ಲೆಯನ್ನು ಕಂಗೆಡಿಸಿದೆ.