-->
Corona Update- ಮಂಗಳೂರು ಪಾಲಿಗೆ ಆತಂಕಕಾರಿ ಕೊರೋನಾ: ಬೆಂಗಳೂರು ನಗರಕ್ಕಿಂತ ಒಂದೂವರೆ ಪಟ್ಟು ಹೆಚ್ಚು!

Corona Update- ಮಂಗಳೂರು ಪಾಲಿಗೆ ಆತಂಕಕಾರಿ ಕೊರೋನಾ: ಬೆಂಗಳೂರು ನಗರಕ್ಕಿಂತ ಒಂದೂವರೆ ಪಟ್ಟು ಹೆಚ್ಚು!



ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಗುರುವಾರ 1857 ದಾಖಲಾಗಿದ್ದು, ಒಟ್ಟು ಸಂಖ್ಯೆಯ ಕಾಲು ಭಾಗ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ದಾಖಲಾಗಿದೆ.


ದಕ್ಷಿಣ ಕನ್ನಡದಲ್ಲಿ ಒಟ್ಟು 475 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರು ನಗರದಲ್ಲಿ 321 ಪ್ರಕರಣಗಳು ದೃಢಪಟ್ಟಿವೆ.


ದಕ್ಷಿಣ ಕನ್ನಡ ಈ ದಿನ ಬೆಂಗಳೂರು ನಗರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಪ್ರಕರಣ ದಾಖಲಿಸಿರುವುದು ಮತ್ತೊಂದು ಗಮನಾರ್ಹ ವಿಚಾರ.


ರಾಜ್ಯದಲ್ಲಿ ಗುರುವಾರ ಕೋವಿಡ್‌ನಿಂದಾಗಿ ಒಟ್ಟು 30 ಸಾವು ಸಂಭವಿಸಿದ್ದು, ಈ ಪೈಕಿ ದ.ಕ. ಮತ್ತು ಬೆಂಗಳೂರು ನಗರದಲ್ಲಿ ತಲಾ ಐದು ಸಾವು ದಾಖಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಜಿಲ್ಲೆಗಳಲ್ಲೂ ಕೋವಿಡ್ ಸೋಂಕಿನ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 


ಕೋವಿಡ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರುವ ಉಡುಪಿ 191 ಪ್ರಕರಣ ದಾಖಲಿಸಿದೆ. ಹಾಸನ 123, ಚಿಕ್ಕಮಗಳೂರು 107, ಮೈಸೂರು 116, ಕೊಡಗು 93 ಮತ್ತು ಉತ್ತರ ಕನ್ನಡ 68 ಪ್ರಕರಣಗಳನ್ನು ದಾಖಲಿಸಿದೆ.

ದಕ್ಷಿಣ ಕನ್ನಡದ ಪಾಸಿಟಿವಿಟಿ ದರವೂ ಏರಿಕೆಯಾಗಿದ್ದು, ಗುರುವಾರ ಶೇ. 4.25ರಷ್ಟಿದ್ದು, ಮತ್ತೆ ಅಪಾಯಕಾರಿ ಮಟ್ಟವನ್ನು ತಲುಪಿದೆ. 

Ads on article

Advertise in articles 1

advertising articles 2

Advertise under the article