
cycle theft from police officer house- ಮಂಗಳೂರು: ಇನ್ಸ್‌ಪೆಕ್ಟರ್ ಮನೆಯಿಂದಲೇ ಸೈಕಲ್ ಕಳವು- ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
Saturday, August 28, 2021
ಮಂಗಳೂರಿನ ಅಪಾರ್ಟ್‌ಮೆಂಟಿನಲ್ಲಿ ಹಾಡಹಗಲೇ ಸೈಕಲ್ ಕಳವು ಮಾಡಲಾಗಿದೆ. ಅದೂ ಇನ್ಸ್‌ಪೆಕ್ಟರ್ ಅವರಿಗೆ ಸೇರಿದ ಸೈಕಲ್.
ಸೈಕಲ್ ಕಳ್ಳ ಹಾಡಹಗಲೇ ಸೈಕಲ್ ಕದ್ದು ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕದ್ದಿರುವ ಈ ಸೈಕಲ್ ಮಂಗಳೂರಿನ ಇನ್ಸ್‌ಪೆಕ್ಟರ್ ಶರೀಫ್ ಅವರಿಗೆ ಸೇರಿದ್ದಾಗಿದೆ.
ಉರ್ವಾ ಮಾರುಕಟ್ಟೆಯ ಹಿಂಬಾಗದಲ್ಲಿ ಇರುವ ಚೈತನ್ಯ ಅಪಾರ್ಟ್‌ಮೆಂಟ್‌ನಲ್ಲಿ ಸೈಕಲ್ ಕಳವು ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪೊಲೀಸರಿಗೆ ಈ ಕಳ್ಳನನ್ನು ಹಿಡಿಯುವುದು ನಿಜಕ್ಕೂ ಸವಾಲಾಗಿಯೇ ಪರಿಣಮಿಸಿದೆ.