-->
Job for locals in Police Dept- ದಕ್ಷಿಣ ಕನ್ನಡ: ಪೊಲೀಸ್ ಇಲಾಖೆ ಉದ್ಯೋಗ ಸ್ಥಳೀಯರಿಗೆ- ಕಮಿಷನರ್ ವಿಶೇಷ ಕಾರ್ಯಕ್ರಮ

Job for locals in Police Dept- ದಕ್ಷಿಣ ಕನ್ನಡ: ಪೊಲೀಸ್ ಇಲಾಖೆ ಉದ್ಯೋಗ ಸ್ಥಳೀಯರಿಗೆ- ಕಮಿಷನರ್ ವಿಶೇಷ ಕಾರ್ಯಕ್ರಮ




ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನೇಮಕಾತಿ ಹೊಂದುತ್ತಿರುವಂತಹ ಸ್ಥಳೀಯರು ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಇದಕ್ಕೆ ಸ್ಥಳೀಯರ ನಿರಾಸಕ್ತಿ ಅಥವಾ ಮಾಹಿತಿಯ ಕೊರತೆ ಕಾರಣ ಇರಬಹುದು.


ಸ್ಥಳೀಯ ಯುವಕ, ಯುವತಿಯರಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ದೊರಕಿಸಿಕೊಡುವಂತೆ ಮಾಡಲು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಹತ್ವದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ.


ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಉದ್ದೇಶದಿಂದ ಒಂದು ತಿಂಗಳ ಕಾರ್ಯಗಾರವನ್ನು ಮಂಗಳೂರು ನಗರ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.





ಇದರಲ್ಲಿ ಪೊಲೀಸ್ ಇಲಾಖೆಗೆ ಇತ್ತೀಚಿನ ತಂಡಗಳಲ್ಲಿ ನೇಮಕಾತಿ ಹೊಂದಿದ ಪಿ.ಎಸ್.ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ ನುರಿತ ತಂಡ ಒಂದು ತಿಂಗಳ ಕಾಲ ತರಬೇತಿಯನ್ನು ನೀಡಲಿದೆ.


ಇದರಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳು ಮತ್ತು ತರಬೇತಿಯ ನಿಯಮಗಳು ಈ ಕೆಳಗಿನಂತಿರುತ್ತವೆ.


1. ವಿಳಾಸದ ಬಗ್ಗೆ ಅಧಿಕೃತ ದಾಖಲಾತಿಯನ್ನು ಸಲ್ಲಿಸುವುದು.


2. ಯಾವುದೇ ಘಟಕದಲ್ಲಿ ಪಿಎಸ್ಐ/ಪಿ.ಸಿ ನೇಮಕಾತಿಯ ಇಟಿ/ಪಿಎಸ್ಟಿ (ಫಿಸಿಕಲ್ ಟೆಸ್ಟ್) ನಲ್ಲಿ ಉತ್ತೀರ್ಣಗೊಂಡ ಬಗ್ಗೆ ದಾಖಲಾತಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.


3. ಅಭ್ಯರ್ಥಿಗಳು RTPCR ನೆಗೆಟೀವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವುದು


4. ದ.ಕ ಜಿಲ್ಲೆಯವರಿಗೆ ಮೊದಲ ಆದ್ಯತೆಯಿದ್ದು, ನಂತರದಲ್ಲಿ ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.


5. ಇದು ಕ್ರ್ಯಾಶ್ ಕೋರ್ಸ್ ರೀತಿಯ 30 ದಿನಗಳ ಕಾರ್ಯಾಗಾರವಾಗಿದ್ದು, ಪುರುಷ ಮತ್ತು ಮಹಿಳಾ ಆಕಾಂಕ್ಷಿಗಳೆಲ್ಲರಿಗೂ ಅವಕಾಶವಿರುತ್ತದೆ.


6. ಮೊದಲನೇ ಹಂತದಲ್ಲಿ 100 ಅಭ್ಯರ್ಥಿ/ಆಕಾಂಕ್ಷಿಗಳಿಗೆ ತರಬೇತಿಯನ್ನು ನೀಡಲಾಗುವುದು.


7. ಊಟ ಮತ್ತು ವಸತಿ ಸೌಲಭ್ಯ ಉಚಿತವಾಗಿದ್ದು, ಕಡ್ಡಾಯವಾಗಿ ನಿಗದಿಪಡಿಸಿದ ಸ್ಥಳದಲ್ಲಿಯೇ ವಾಸ್ತವ್ಯವಿರುವುದು.


(ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ)


8. ತರಗತಿ-ತರಬೇತಿ-ಓದುವುದು ಮುಂಜಾನೆ 08.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಕಡ್ಡಾಯವಾಗಿದ್ದು, ಅಭ್ಯರ್ಥಿಗಳು ಇಲ್ಲೇ ಇದ್ದು ಸಕ್ರಿಯವಾಗಿ ಪಾಲ್ಗೊಳ್ಳುವುದು.


9 ಅವಶ್ಯಕ ಅಧ್ಯಯನ ಸಾಮಾಗ್ರಿಗಳನ್ನು ವೈಯುಕ್ತಿಕವಾಗಿ ಅಭ್ಯರ್ಥಿಗಳೇ ಖರೀದಿ ಮಾಡಬೇಕು.


ಈ ಪ್ರಕಾರ ತರಬೇತಿಗೆ ಆಸಕ್ತಿ/ಇಚ್ಚೆ ಹೊಂದಿರುವ ಆಕಾಂಕ್ಷಿಗಳು, ಸೋಮವಾರ ದಿ:09.08.2021 ರಿಂದ ಮಂಗಳೂರು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ತೆರೆಯಲಾಗುವ REGISTRATION DESK ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಸಬಹುದು. 


ಈ ಕಾರ್ಯಾಗಾರಕ್ಕೆ ಸೈಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯು ವಾಸ್ತವ್ಯ, ಕ್ಲಾಸ್ ರೂಂ ಮತ್ತು ಲೈಬ್ರೇರಿಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಆಸಕ್ತ ಆಕಾಂಕ್ಷಿಗಳು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ಈ ಕಾರ್ಯಗಾರದ ಸದುಪಯೋಗ ಪಡಿಸಿಕೊಳ್ಳಬಹುದು.

Ads on article

Advertise in articles 1

advertising articles 2

Advertise under the article