-->
New SOP from Sept 1- High Court- ನ್ಯಾಯಾಲಯ ಕಲಾಪ - ಸೆಪ್ಟೆಂಬರ್ 1ರಿಂದ ಹೊಸ ಮಾರ್ಗಸೂಚಿ- ಕರ್ನಾಟಕ ಹೈಕೋರ್ಟ್

New SOP from Sept 1- High Court- ನ್ಯಾಯಾಲಯ ಕಲಾಪ - ಸೆಪ್ಟೆಂಬರ್ 1ರಿಂದ ಹೊಸ ಮಾರ್ಗಸೂಚಿ- ಕರ್ನಾಟಕ ಹೈಕೋರ್ಟ್




ಸೆಪ್ಟಂಬರ್ 1ರಿಂದ ಕರ್ನಾಟಕ ಹೈಕೋರ್ಟ್ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಪ್ರಕಾರ, ಜಿಲ್ಲಾ ನ್ಯಾಯಾಲಯಗಳ ಕಾರ್ಯವಿಧಾನ, ಕಲಾಪಗಳಲ್ಲಿ ಈ ಕೆಳಗಿನಂತೆ ಬದಲಾವಣೆಯಾಗಲಿದೆ.


೧) ಎಲ್ಲ ಕೋರ್ಟ್ ಕಾಂಪ್ಲೆಕ್ಸ್ ಗಳಲ್ಲಿ ಥರ್ಮಲ್ ಪರೀಕ್ಷೆ ಕಡ್ಡಾಯವಾಗಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸುವ ಯಾವುದೇ ವ್ಯಕ್ತಿಯ ಪ್ರವೇಶ ನಿರ್ಬಂಧಿಸಬಹುದು.


೨) ಕೋರ್ಟ್ ಕಟ್ಟಡಗಳಲ್ಲಿ ಅಗತ್ಯ ಬಿದ್ದರೆ ಎರಡು ಪ್ರತ್ಯೇಕ ದ್ವಾರ ವ್ಯವಸ್ಥೆ ಮಾಡುವುದು. ಒಂದು ನ್ಯಾಯಾಲಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮೀಸಲಿಡುವುದು. ಇನ್ನೊಂದು ಸಾಕ್ಷಿದಾರರು, ಪೊಲೀಸರು, ಸರ್ಕಾರಿ ಅಧಿಕಾರಿಗಳು ಇತರೆ ವ್ಯಕ್ತಿಗಳಿಗೆ... ಎರಡು ದ್ವಾರಗಳಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸುವುದು


೩) ಕೋರ್ಟ್ ಕಲಾಪ ಸೇರಿದಂತೆ ನ್ಯಾಯಾಲಯದ ಒಳಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಅಥವಾ ಸೋಪ್‌ ಬಳಸಿ ಕೈತೊಳೆಯಲು ವ್ಯವಸ್ಥೆ ಸೇರಿದಂತೆ ಸರ್ಕಾರದ ಕೋವಿಡ್ ನಿಯಮ ಪಾಲಿಸಲು ಎಲ್ಲ ಕ್ರಮ ಕೈಗೊಳ್ಳಬೇಕು.


೪) ಈ ಮೇಲಿನ ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ನ್ಯಾಯಾಲಯ ಆವರಣದಿಂದ ಹೊರ ಹಾಕಲು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಿಗೆ ಅಧಿಕಾರ ನೀಡಲಾಗಿದೆ.



೫) ಪ್ರತಿ ನ್ಯಾಯಾಲಯದಲ್ಲಿ ಕರೆಯಲಾಗುವ ಕೇಸ್‌ಗಳನ್ನು ಎರಡು ಕಲಾಪಗಳಾಗಿ ವಿಂಗಡಿಸುವುದು, ಕಲಾಪಗಳನ್ನು ಬೆಳಿಗ್ಗೆ ಹಾಗೂ ಅಪರಾಹ್ನದ ಕಲಾಪಗಳಾಗಿ ವಿಂಗಡಿಸುವುದು. ಅಗತ್ಯವಿರುವ ಎಲ್ಲ ಕೇಸ್‌ಗಳ ವಿಚಾರಣೆಗೆ ಪಟ್ಟಿ ಮಾಡುವುದು



೬) ನ್ಯಾಯಾಲಯ ಆವರಣದಲ್ಲಿ , ಕಚೇರಿಯೊಳಗೆ, ವಕೀಲರ ಸಂಘದ ಕಚೇರಿ ಹಾಗೂ ಪರಿಸರದಲ್ಲಿ ವಕೀಲರು, ಕಕ್ಷಿದಾರರು, ಸಾಕ್ಷಿದಾರರು, ಪೊಲೀಸ್ ಸಿಬ್ಬಂದಿ ಹಾಗೂ ಇತರೆ ವ್ಯಕ್ತಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು.



೭) ಅತೀ ಜರೂರು ಹಾಗೂ ತೀರಾ ಅಗತ್ಯದ ಸಂದರ್ಭದಲ್ಲಿ ಮಾತ್ರ ಕಕ್ಷಿದಾರರು/ಸಾಕ್ಷಿದಾರರ ಖುದ್ದು ಹಾಜರಿಗೆ ಕೋರ್ಟ್ ಕಲಾಪಕ್ಕೆ ಭಾಗಿಯಾಗುವಂತೆ ವಕೀಲರು ನೋಡಿಕೊಳ್ಳಬೇಕು. ಇದರಿಂದ ಅನಗತ್ಯ ದಟ್ಟಣೆ ನಿಯಂತ್ರಣ ಮಾಡಬಹುದು. ಯಾವುದೇ ಕಾರಣ ನೀಡದೆ ಅನಗತ್ಯವಾಗಿ ಬರುವ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲು ಕೋರ್ಟ್ ಅಧಿಕಾರಿಗೆ ಹಕ್ಕು ನೀಡಲಾಗಿದೆ.



೮) ಅನಗತ್ಯವಾಗಿ ಜನ ಕೋರ್ಟ್ ಪರಿಸರಕ್ಕೆ ಬರದಂತೆ ವಕೀಲರ ಸಂಘ ಮನವಿ ಮಾಡುವುದು.



೯) ವಕೀಲರ ಸಂಘದ ಪುಸ್ತಕಾಲಯ, ಇ-ಲೈಬ್ರೇರಿ, ಜೆರಾಕ್ಸ್, ಬೆರಳಚ್ಚು, ನೋಟರಿ, ಓತ್ ಕಮಿಷನರ್‌ಗಳ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ, ಈ ವ್ಯವಸ್ಥೆಯಲ್ಲಿ ಇರುವವರು ಎರಡೂ ಡೋಸ್‌ ಲಸಿಕೆ ಪಡೆದಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅಗತ್ಯ ಬಿದ್ದರೆ, ಅದಕ್ಕೆ ಸೂಕ್ತ ದಾಖಲೆ/ಸರ್ಟಿಫಿಕೇಟ್ ಹಾಜರುಪಡಿಸುವುದು



೧೦) ವಕೀಲರ ಸಂಘ ತೆರೆಯಲು ಅವಕಾ. ಆದರೆ, ಆರು ಅಡಿ ಅಂತರ ಕಾಪಾಡಲು ಕ್ರಮ ಕೈಗೊಳ್ಳಬೇಕು. ಅರ್ಧದಷ್ಟು ಆಸನ ವ್ಯವಸ್ಥೆಯನ್ನು ಕಡಿತಗೊಳಿಸುವುದು. ಈ ನಿಯಮವನ್ನು ವಕೀಲರ ಸಂಘಗಳು ಪಾಲಿಸದಿದ್ದರೆ, ಅಂಥ ವಕೀಲರ ಸಂಘಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಅಧಿಕಾರ ನೀಡಲಾಗಿದೆ. ಅದೇ ರೀತಿ, ಪಾಸಿಟಿವ್ ಆದವರಿಗೆ ಸೂಕ್ತ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಮತ್ತು ಅದರ ಬಗ್ಗೆ ನ್ಯಾಯಾಧೀಶರಿಗೆ ವರದಿ ನೀಡುವುದು ವಕೀಲರ ಸಂಘದ ಜವಾಬ್ದಾರಿಯಾಗಿರುತ್ತದೆ.


೧೧) ವಕೀಲರ ಸಂಗದಲ್ಲಿ ಆಟೋಟ, ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮ ನಡೆಸಲು ನಿರ್ಬಂಧ ವಿಧಿಸಲಾಗಿದೆ. ವಾರಕ್ಕೊಮ್ಮೆ ವಕೀಲರ ಸಂಘದಲ್ಲಿ ಸ್ಯಾನಿಟೈಸರ್ ಮಾಡುವ ವ್ಯವಸ್ಥೆ ಮಾಡುವುದು.



೧೨) ಈ ಮಾರ್ಗಸೂಚಿಯನ್ವಯ ಮೇ 21, 2021ರ ಮಾರ್ಗಸೂಚಿ ರದ್ದು ಆಗಲಿದ್ದು, ಅದಕ್ಕೂ ಹಿಂದೆ ಇದ್ದ ವ್ಯವಸ್ಥೆ ಪ್ರಕಾರ ಕೋರ್ಟ್ ಕಲಾಪ ನಡೆಯಲಿದೆ.



೧೩) ಕೋವಿಡ್ 19ರ ಪ್ರಸ್ತುತ ಸ್ಥಿತಿಗತಿ ಆಧಾರದಲ್ಲಿ ಈಗಿರುವ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಪರಿಸ್ಥಿತಿ ಬದಲಾದರೆ, ಮಾರ್ಗಸೂಚಿಯಲ್ಲೂ ಬದಲಾವಣೆ ಆಗಲಿದೆ.





ಪ್ರಾಯೋಗಿಕವಾಗಿ ಈ ಬದಲಾವಣೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಆದರೆ, ಯಾವುದೇ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಆತಂಕಕಾರಿಯಾಗಿ ಏರಿಕೆಯಾದರೆ ಆಯಾ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಕ್ಷಣ ಹೈಕೋರ್ಟ್‌ಗೆ ಮಾಹಿತಿ ನೀಡಬೇಕು. ಆ ಆಧಾರದಲ್ಲಿ ಮಾರ್ಗಸೂಚಿಯಲ್ಲಿ ಬದಲಾವಣೆಯನ್ನು ಮಾಡಲಾಗುತ್ತದೆ.





Ads on article

Advertise in articles 1

advertising articles 2

Advertise under the article