Ramanatha Rai- ರಾಜಧರ್ಮ ಪಾಲನೆ ಎಂದರೆ ಇದೇನಾ? : ಬಂಟ್ವಾಳದಲ್ಲಿ ಮಾಜಿ ಸಚಿವ ರಮಾನಾಥ ರೈ
ಬಂಟ್ವಾಳ: ಬಿಪಿಎಲ್ ಕಾರ್ಡ್ ರದ್ದುಮಾಡುವುದು, ಅದನ್ನು ಪುನರ್ ವಿಮರ್ಶೆ ಮಾಡಿ ಕೊಡಿಸುತ್ತೇವೆ ಎನ್ನುವುದು ಆಡಳಿತ ಪಕ್ಷದ ಪ್ರಚಾರದ ತಂತ್ರ ಎಂದು ಬಂಟ್ಚಾಳದಲ್ಲಿ ಆರೋಪಿಸಿರುವ ಮಾಜಿ ಸಚಿವ ಬಿ.ರಮಾನಾಥ ರೈ, ರಾಜಧರ್ಮದ ಕುರಿತು ಕೇವಲ ಭಾಷಣ ಮಾಡಿದರೆ ಸಾಲದು ಅನುಷ್ಟಾನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ.
ಆಡಳಿತ ಪಕ್ಷಕ್ಕೆ ಸಂಬಂಧಪಟ್ಟವರೇ ಬಿಪಿಎಲ್ ಕಾರ್ಡ್ ರದ್ದು ವಿಚಾರದಲ್ಲಿ ಹೇಳಿಕೆ ನೀಡುತ್ತಿದ್ದಾರೆ, ರದ್ದು ಮಾಡಿದ್ದು ಯಾರು, ಮತ್ತೆ ಕೊಡಿಸುವುದಾಗಿ ಹೇಳುವುದು ಪ್ರಚಾರ ಗಿಟ್ಟಿಸಿಕೊಳ್ಳಲೋ ಎಂದವರು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರಿಗೆ ಪರಿಹಾರ ನೀಡುವುದು ಸಜೀವ ಸರ್ಕಾರದ ಜವಾಬ್ದಾರಿ. ಅದನ್ನು ಕಾರ್ಯರೂಪಕ್ಕಿಳಿಸಬೇಕು ಎಂದ ಅವರು, ತುಂಬೆ ವೆಂಟೆಡ್ ಡ್ಯಾಂನ ವಿಚಾರದಲ್ಲಿ 17 ಕೋಟಿ ರೂಗಳನ್ನು ಪರಿಹಾರಕ್ಕಾಗಿ ಮಂಜೂರು ಮಾಡಿಸಿದ್ದೇನೆ ಎಂದರು.
ತಾನು ಮಣ್ಣಿನ, ಕಲ್ಲಿನ ವ್ಯಾಪಾರ ಮಾಡುತ್ತಿಲ್ಲ, ಕೇವಲ ಕೃಷಿ ಮಾಡುತ್ತಿದ್ದೇನೆ. ಕೆಲವರು ಭರವಸೆ ಕೊಟ್ಟದ್ದನ್ನು ಪತ್ರಿಕಾಗೋಷ್ಟಿ ಮಾಡ್ತಾರೆ, ನಾನು ಆದೇಶ ಪತ್ರ ತೋರಿಸಿ ಪತ್ರಿಕಾಗೋಷ್ಠಿ ಮಾಡುತ್ತಿದ್ದೇನೆ ಎಂದರು.
ರಾಜಾರೋಷವಾಗಿ ಈಗ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆಪಾದಿಸಿದ ರೈ, ಈಗಿನ ಶಾಸಕರ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ರನ್ನ ಹತ್ತು ವರ್ಷಗಳ ಅವಧಿಯಲ್ಲಾದ ವರ್ಗಾವಣೆಯನ್ನು ಹೋಲಿಸಿ ಯಾವುದು ಜಾಸ್ತಿ ಎಂದು ಸವಾಲೆಸೆದರು.
ಕೋಟಿ ರೂಗಳ ಕಾಮಗಾರಿಯನ್ನು ಬಿಜೆಪಿಯ ಕಾರ್ಯಕರ್ತರು ಮಾಡುತ್ತಿದ್ದಾರೆ, ಯಾರೋ ಗುತ್ತಿಗೆ, ಕೆಲಸ ಯಾರದ್ದೋ ಎಂಬಂತಾಗಿದೆ.ಯಾರದ್ದೋ ಮನೆಯಲ್ಲಿ ಕಾರ್ಮಿಕರ ಕಿಟ್ ಕೊಡಲಾಗುತ್ತಿದೆ.