-->
Single dose vaccine | ಸಿಹಿ ಸುದ್ದಿ: ಭಾರತಕ್ಕೆ ಬರಲಿದೆ ಸಿಂಗಲ್ ಡೋಸ್ ಕೊವಿಡ್ ಲಸಿಕೆ

Single dose vaccine | ಸಿಹಿ ಸುದ್ದಿ: ಭಾರತಕ್ಕೆ ಬರಲಿದೆ ಸಿಂಗಲ್ ಡೋಸ್ ಕೊವಿಡ್ ಲಸಿಕೆ






ಕೊರೋನಾ ಸಂಕಷ್ಟದಿಂದ ನೊಂದ ಜಗತ್ತಿಗೆ ಒಂದು ಸಿಹಿ ಸುದ್ದಿ. ದೇಶದ ಜನರಿಗೆ ಸಿಹಿಸುದ್ದಿಯೊಂದು ಲಭಿಸಿದ್ದು, ಸಿಂಗಲ್ ಡೋಸ್ ಲಸಿಕೆ ಶೀಘ್ರವೇ ಭಾರತಕ್ಕೆ ಬರಲಿದೆ ಎಂದು ವರದಿಯಾಗಿದೆ.


ಭಾರತದಲ್ಲಿ ಡಬಲ್ ಡೋಸ್ ಲಸಿಕೆ ಇದೀಗ ಲಭ್ಯವಿದೆ. ಒಂದು ಡೋಸ್ ಲಸಿಕೆ ಹಾಕಿಸಿಕೊಂಡರೂ ಇನ್ನೊಂದು ಡೋಸ್ ಲಸಿಕೆಗೆ ಮತ್ತೆ ಸಾಹಸ ಪಟ್ಟವರಿದ್ದಾರೆ. ಅಂಥವರಿಗೆ ಇದು ಸಿಹಿ ಸುದ್ದಿ.


ಅಮೆರಿಕಾ ಔಷಧಿ ಕಂಪೆನಿ ಜಾನ್ಸನ್ ಆಂಡ್ ಜಾನ್ಸನ್ ತನ್ನ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರದ ಒಪ್ಪಿಗೆ ಕೇಳಿದೆ ಎಂದು ಹೇಳಲಾಗಿದ್ದು, ಭಾರತ ಸರ್ಕಾರ ಒಪ್ಪಿಗೆ ನೀಡಿದರೆ, ಭಾರತದಲ್ಲಿ ಸಿಂಗಲ್ ಡೋಸ್ ಕೊವಿಡ್ ಲಸಿಕೆ ಸಿಗಲಿದ್ದು, ಇದು ಜನರ ಹೊರೆಯನ್ನು ಕಡಿಮೆ ಮಾಡಲಿದೆ.

ದೇಶದಲ್ಲಿ ಈಗ ಕೊವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಮಾತ್ರ ಲಭ್ಯವಿದೆ. ಆದರೆ ಈ ಲಸಿಕೆಗಳು ಡಬಲ್ ಡೋಸ್ ಲಸಿಕೆಗಳಾಗಿವೆ.


 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಈವರೆಗೆ 49.53 ಕೋಟಿಗಿಂತ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ.


 ಇದೀಗ ಸಿಂಗಲ್ ಡೋಸ್ ಲಸಿಕೆ ಭಾರತದಲ್ಲಿ ಲಭ್ಯವಾದರೆ, ಲಸಿಕಾ ಅಭಿಯಾನ ವೇಗವಾಗಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Ads on article

Advertise in articles 1

advertising articles 2

Advertise under the article