twitter unlock | ಬಾಲ ಮುದುರಿದ ಟ್ವಿಟ್ಟರ್: "ಸತ್ಯಮೇವ ಜಯತೆ" ಎಂದ ರಾಹುಲ್ ಗಾಂಧಿ!
ಭಾರತದ ಆಂತರಿಕ ರಾಜಕೀಯದಲ್ಲಿ ಟ್ವಟ್ಟರ್ ಮಧ್ಯಪ್ರವೇಶ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಟ್ವಿಟರ್ ತನ್ನ ನಿಲುವನ್ನು ಸಡಿಲಗೊಳಿಸಿದೆ. ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ರದ್ದುಗೊಳಿಸಿದ್ದ ಸಂಸ್ಥೆ ಅನ್ ಲಾಕ್ ಮಾಡಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಮಾಡಿದೆ.
ಟ್ವಿಟ್ಟರ್ನ ಈ ನಡೆ ಕಾಂಗ್ರೆಸ್ ವಲಯದಲ್ಲಿ ಸಂತಸ ಮೂಡಿಸಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಟ್ವಿಟರ್ ಖಾತೆ ಓಪನ್ ಆಗುತ್ತಿದ್ದಂತೆ "ಸತ್ಯ ಮೇವ ಜಯತೆ" ಎಂಬ ವಾಕ್ಯವನ್ನು ಹಾಕಿ ಈ ನಡೆಯನ್ನು ಸ್ವಾಗತಿಸಿದೆ.
ದೇಶದ ಪ್ರಜಾಪ್ರಭುತ್ವ ಮತ್ತು ಸಾರ್ವಭವ್ಮತ್ವದ ವಿಷಯದಲ್ಲಿ ಟ್ವಿಟರ್ ಮೂಗುತೂರಿಸುತ್ತಿದೆ ಮತ್ತು ಪ್ರತಿಪಕ್ಷದ ಧ್ವನಿಯನ್ನು ದಮನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಆರೋಪಿಸಿದ ಬೆನ್ನಲ್ಲೇ ಟ್ವಿಟರ್ನ ಈ ನಡೆ ಅಚ್ಚರಿಗೂ ಕಾರಣವಾಗಿದೆ. ಅನ್ಲಾಕ್ ಬಗ್ಗೆ ಟ್ವಿಟ್ಟರ್ ಇದುವರೆಗೂ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ದೆಹಲಿಯಲ್ಲಿ ನಡೆದಿದ್ದ ಬಾಲಕಿಯ ಅತ್ಯಾಚಾರ ಮತ್ತು ಕಗ್ಗೊಲೆಯ ಬಗ್ಗೆ ರಾಹುಲ್ ಗಾಂಧಿ ಅವರ ಟ್ವಿಟರ್ ಸಂದೇಶದ ಬಳಿಕ ಅವರ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಬಳಿಕ ಕಾಂಗ್ರೆಸ್ ಟ್ವಿಟರ್ ಖಾತೆಗೂ ಗೂ ಅದೇ ಗತಿಯಾಗಿತ್ತು. ಒಂದು ವಾರದ ಬಳಿಕ ಈಗ ಟ್ವಿಟರ್ ಖಾತೆಯನ್ನು ಅನ್ಲಾಕ್ ಮಾಡಿದೆ.