-->
Appeal to Home minister- ಕರಾವಳಿಯ ದೇಶದ್ರೋಹಿ, ಸಮಾಜ ವಿರೋಧಿ ಕೃತ್ಯಕ್ಕೆ ಕಡಿವಾಣ: ಗೃಹ ಸಚಿವರಿಗೆ ಮನವಿ

Appeal to Home minister- ಕರಾವಳಿಯ ದೇಶದ್ರೋಹಿ, ಸಮಾಜ ವಿರೋಧಿ ಕೃತ್ಯಕ್ಕೆ ಕಡಿವಾಣ: ಗೃಹ ಸಚಿವರಿಗೆ ಮನವಿ



ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿಯಲ್ಲಿ ನಡೆಯುತ್ತಿರುವ ದೇಶ ವಿರೋಧಿ, ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟಹಾಕಲು ಕ್ರಮಕೈಗೊಳ್ಳುವಂತೆ ಗೃಹ ಸಚಿವರಿಗೆ ಹಿಂದೂ ಸಂಘಟನೆಗಳು ಮನವಿ ಸಲ್ಲಿಸಿವೆ.


ದಕ್ಷಿಣ ಕನ್ನಡದಲ್ಲಿ ಗಲಭೆ ಎಬ್ಬಿಸುವ ಯೋಜಿತ ಷಡ್ಯಂತ್ರವು ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ವಿವಿಧ ನೆಪಗಳನ್ನು ಮುಂದಿಟ್ಟುಕೊಂಡು ಹಿಂದುಗಳ ಮೇಲೆ ಆಕ್ರಮಣ, ದಾಳಿ, ಹಲ್ಲೆ ಕೃತ್ಯಗಳನ್ನು ನಡೆಸುವುದು. ಶಾಂತಿ ಸಾಮರಸ್ಯವನ್ನು ಕೆಡಿಸುವುದು, ಮತಾಂಧತೆಯನ್ನು ಹರಡುವುದು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ತೊಡಗಿಕೊಂಡಿರುವುದು ಕಂಡುಬಂದಿದೆ ಎಂದು ಅವು ಆರೋಪಿಸಿವೆ.


ಕಬಕದಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮ ತಡೆದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ PFI ಮತ್ತು SDPI ಕಾರ್ಯಕರ್ತರು ಅವಮಾನ ಮಾಡಿರುವುದು, ಉಳ್ಳಾಲದ ಕಾಂಗ್ರೆಸ್ ನ ಮಾಜಿ ಶಾಸಕರಾದ ದಿ ಇದಿನಬ್ಬರವರ ಕುಟುಂಬಕ್ಕೆ ಭಯೋತ್ಪಾದಕರ ಜೊತೆ ನಂಟಿನ ಆರೋಪದಲ್ಲಿ NIA ದಾಳಿ, ಗೋ ಕಳವು - ಗೋಕಳ್ಳ ಸಾಗಣೆ, ಗೋ ಹತ್ಯೆ, ಲವ್ ಜಿಹಾದ್, ಮತಾಂತರ, ಹಿಂದು ಪವಿತ್ರ ಕ್ಷೇತ್ರಗಳ ಅಪವಿತ್ರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ದೈವ ದೇವರುಗಳ ಬಗ್ಗೆ ಅಶ್ಲೀಲಾವಾಗಿ ಚಿತ್ರಿಸಿ ಅವಮಾನ ಮಾಡುತ್ತಿರುವಂತಹ ಕೆಲವು ಘಟನೆಗಳು ಇದಕ್ಕೆ ತಾಜಾ ಸಾಕ್ಷಿ. ಅದರಿಂದ ತಾವು ಈ ಬಗ್ಗೆ ಪರಿಶೀಲಿಸಿ ಶಾಂತಿ ಭಂಜಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮನವಿ ಮಾಡಲಾಗಿದೆ.


1) ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ರಥ ಯಾತ್ರೆಗೆ ಅಡ್ಡಿಪಡಿಸಿದ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಅವಮಾನಿಸಿದ ಆರೋಪಿಗಳಿಗೆ ರಾಷ್ಟ್ರದ್ರೋಹದ ಮೊಕ್ಕದ್ದಮೆಯನ್ನು ದಾಖಲಿಸಬೇಕು.


2) ಕರಾವಳಿಯಲ್ಲಿ ಉಗ್ರಗಾಮಿಗಳ ಜೊತೆ ಕೆಲವರಿಗೆ ಸಂಪರ್ಕವಿದ್ದು ಕರಾವಳಿಯನ್ನು ಭಯೋತ್ಪಾದನಾ ಚಟುವಟಿಕೆಯ ತಾಣವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ನಿಗ್ರಹ ಮಾಡಲು ಮಂಗಳೂರಿನಲ್ಲಿ NIA ಕಚೇರಿಯನ್ನು ಸ್ಥಾಪಿಸಬೇಕು


3) ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದು ಯುವತಿಯರನ್ನು ಮದುವೆಯಾಗಿ ಇಸ್ಲಾಮಿಗೆ ಮಾತಾಂತರ ಮಾಡಿ ಷಡ್ಯಂತ್ರ ಲವ್ ಜಿಹಾದ್, ಮದುವೆಯಾದ ಯುವತಿಯರನ್ನು ದೇಶದ್ರೋಹದ, ಸಮಾಜ ದ್ರೋಹದ ಚಟುವಟಿಕೆಗಳಿಗೆ ತೊಡಗಿಸುತ್ತಿರುವುದು ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಲವ್ ಜಿಹಾದ್ ತಡೆ ಕಾನೂನು ತರಬೇಕು.

4 ) ಸಾಮಾಜಿಕ ಜಾಲತಾಣಗಲ್ಲಿ ಹಿಂದು ದೈವ ದೇವರುಗಳ ಬಗ್ಗೆ ಅಷ್ಲೀಲವಾಗಿ ಚಿತ್ರಿಸಿ ಅವಹೇಳನ ಅಪಮಾನ ಮಾಡುವುದು ಮತ್ತು ಹಿಂದು ಸಂಘಟನೆಯ ನಾಯಕರ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು.ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಾನ್ಯ ಗೃಹ ಸಚಿವರಿಗೆ ವಿನಂತಿ ಮಾಡಲಾಯಿತು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದರು.

ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತಡ್ಕ, ವಿಭಾಗ ಬಜರಂಗದಳ ಸಂಯೋಜಕ್ ಭುಜಂಗ ಕುಲಾಲ್, ಹಿಂಜಾವೇ ಪ್ರಾಂತ ಕಾರ್ಯದರ್ಶಿ ರಾಧಾಕೃಷ ಅಡ್ಯಂತಾಯ, ಪ್ರಾಂತ ಉಪಾಧ್ಯಕ್ಷರು ಕಿಶೋರ್ ಕುಮಾರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article