
Wipro inviting job application for Hiring freshers- ವಿಪ್ರೋದಲ್ಲಿ ನೇಮಕಾತಿ- ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ ಐಟಿ ದಿಗ್ಗಜ
ವಿಪ್ರೋದಲ್ಲಿ ನೂತನ ನೇಮಕಾತಿ
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ ಐಟಿ ದಿಗ್ಗಜ
30 ಸಾವಿರ ವಿದ್ಯಾರ್ಥಿಗಳಿಗೆ ವಿಪ್ರೋ ಆಫರ್ ಲೆಟರ್
ವೇತನ: ಕನಿಷ್ಟ 3.5 ಲಕ್ಷ (ವಾರ್ಷಿಕ)
2022ರಲ್ಲಿ ಶೈಕ್ಷಣಿಕ ವರ್ಷ ಮುಗಿಸುತ್ತಿರುವ ವಿದ್ಯಾರ್ಥಿಗಳ ನೇಮಕಾತಿಗೆ ವಿಪ್ರೋ ಮುಂದಾಗಿದೆ. ರಾಷ್ಟ್ರೀಯ ಪ್ರತಿಭಾ ಅನ್ವೇಷಣೆಯ ಭಾಗವಾಗಿ ಉದ್ಯೋಗ ನೀಡಲು ವಿಪ್ರೋ ಹೊಸ ಯೋಜನೆಯನ್ನು ಪರಿಚಯಿಸಿದೆ.
ಫ್ರೆಷರ್
ಹೊಸದಾಗಿ ವೃತ್ತಿ ಜೀವನ ಆರಂಭಿಸಲಿರುವ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ವಿಪ್ರೋ ಆಫರ್ ಲೆಟರ್ ನೀಡಲಿದೆ. ಇದರಲ್ಲಿ ಸುಮಾರು 22 ಸಾವಿರ ವಿದ್ಯಾರ್ಥಿಗಳು ವಿಪ್ರೋದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಲಿದ್ದಾರೆ.
ನೂತನ ನೇಮಕಾತಿ ನಿಯಮ (ಹೈರಿಂಗ್ ಪಾಲಿಸಿ)ದ ಪ್ರಕಾರ ಆಗಸ್ಟ್ 23ರಂದು ಅರ್ಜಿಗಳ ನೋಂದಣಿ ಕಾರ್ಯ ನಡೆಯಲಿದೆ. ಸೆಪ್ಟೆಂಬರ್ 15ರ ವರೆಗೆ ಈ ಕಾರ್ಯ ನಡೆಯಲಿದೆ. ಸೆಪ್ಟಂಬರ್ 25ರಿಂದ 27ರ ವರೆಗೆ ಈ ಅರ್ಜಿಗಳ ಪರಿಶೀಲನೆ ನಡೆಸಲಿದ್ದು, ಆನ್‌ಲೈನ್‌ನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ವಿಪ್ರೋ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಅರ್ಹತೆ:
ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ಬಿಇ/ಬಿಟೆಕ್(ಪದವಿ ಕಡ್ಡಾಯ) ಅಥವಾ ಎಂಇ/ಎಂಟೆಕ್(5 ವರ್ಷಗಳ ಕೋರ್ಸ್) ಪಡೆದಿರಬೇಕು.
20220ರಲ್ಲಿ ಪದವಿ/ಸ್ನಾತಕೋತ್ತರ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು
ವಯಸ್ಸು- 25 ವರ್ಷ
ವೇತನ: ಕನಿಷ್ಟ 3.5 ಲಕ್ಷ (ವಾರ್ಷಿಕ)
ಹೆಚ್ಚಿನ ಮಾಹಿತಿಗೆ ವಿಪ್ರೋ ಸಂಸ್ಥೆಯ ಲಿಂಕ್ ಬಳಸಿ
https://careers.wipro.com/careers-home