ನ್ಯಾಯಾಲಯದ ಆದೇಶದಿಂದ ಆ್ಯಪಲ್ ಸಂಸ್ಥೆಗೆ ಸಂಕಷ್ಟ: 100 ಬಿಲಿಯನ್ ಡಾಲರ್ ನಷ್ಟ
Tuesday, September 14, 2021
ನ್ಯೂಯಾರ್ಕ್: ಪ್ರಪಂಚದ ಪ್ರಸಿದ್ಧ ತಂತ್ರಜ್ಞಾನ ಸಂಸ್ಥೆ ಆ್ಯಪಲ್ ಗೆ ನ್ಯಾಯಾಲಯವು ನೀಡಿರುವ ಆದೇಶದಿಂದ ಸುಮಾರು 100 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆ್ಯಪಲ್ ಸಂಸ್ಥೆಯ ಆ್ಯಪ್ಸ್ಟೋರ್ನಲ್ಲಿದ್ದ ಥರ್ಡ್ ಪಾರ್ಟಿ ಆ್ಯಪ್ ಪಾವತಿ ವ್ಯವಸ್ಥೆಯನ್ನು ಮೊಬೈಲ್ ಅಪ್ಲಿಕೇಷನ್ ರೂಪಿಸುವವರು(ಆ್ಯಪ್ ಡೆವಲಪರ್ ಗಳು) ಬಳಸುವಂತಿಲ್ಲ ಎಂದು ಅಮೆರಿಕದ ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದೆ. ಆ್ಯಪ್ ಡೆವಲಪರ್ ಗಳು ಇನ್-ಆ್ಯಪ್ ದರೆ ಶುಲ್ಕ ಇರುವ ಖರೀದಿ ಮಾತ್ರ ಮಾಡಬೇಕೆಂದು ಕಡ್ಡಾಯಗೊಳಿಸುವಂತಿಲ್ಲ. ಆದ್ದರಿಂದ ಇತರ ಸಂವಹನ ಮಾರ್ಗಗಳ ಮೂಲಕ ವ್ಯವಹಾರ ನಡೆಸದಂತೆ ನಿರ್ಬಂಧ ಮಾಡಲು ಆ್ಯಪಲ್ ಟೆಕ್ನಾಲಜಿ ಸಂಸ್ಥೆಗೆ ಅವಕಾಶವಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯ ಈ ಆದೇಶ ಮಾಡುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಆ್ಯಪಲ್ ಸಂಸ್ಥೆಯ ಷೇರು ಮೌಲ್ಯ 3 ಶೇ. ಕುಸಿದಿದೆ. ಇದರಿಂದ ಸಂಸ್ಥೆಗೆ ಸುಮಾರು 100 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಸಿಎನ್ ಬಿಸಿ ವರದಿ ಮಾಡಿದೆ.