ಕೇರಳದಲ್ಲಿ ಆಟೋ ಡ್ರೈವರ್ಗೆ ಒಲಿದ ಓಣಂ ಬಂಪರ್ ಲಾಟರಿ: 12 ಕೋಟಿ ರೂ. ಗೆದ್ದ ಜಯಪಾಲನ್
Tuesday, September 21, 2021
ಕೊಚ್ಚಿ(ಕೇರಳ): ಆಟೋಚಾಲಕ ರೋರ್ವರಿಗೆ ಕೇರಳದ ಓಣಂ ಬಂಪರ್ ಲಾಟರಿ 12 ಕೋಟಿ ರೂ. ಜಾಕ್ಪಾಟ್ ಹೊಡೆದಿದ್ದು, ಈ ಮೂಲಕ ಅವರು ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾರೆ.
ಕೇರಳದ ಮರಡು ಮೂಲದ ಆಟೋ ರಿಕ್ಷಾ ಚಾಲಕ ಜಯಪಾಲನ್ 12 ಕೋಟಿ ರೂ. ಜಾಕ್ ಪಾಟ್ ಹೊಡೆದವರು.
ಜಯಪಾಲನ್ TE 645465 ಸಂಖ್ಯೆಯ ಓಣಂ ಬಂಪರ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅದರ ಫಲಿತಾಂಶ ಪ್ರಕಟಗೊಂಡಿದ್ದು, ಇವರು ಖರೀದಿಸಿರುವ ಟಿಕೆಟ್ಗೆ 12 ಕೋಟಿ ರೂ. ಬಂಪರ್ ಬಹುಮಾನ ಲಭಿಸಿದೆ.
ಬಂಪರ್ ಬಹುಮಾನ ಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿರುವ ಜಯಪಾಲನ್, ಸೆ.10ರಂದು ತಾನು ಫ್ಯಾನ್ಸಿ ನಂಬರ್ ಎಂದು ಈ ಟಿಕೆಟ್ ಖರೀದಿಸಿದ್ದೆ. ನಾನು ಖರೀದಿಸಿರುವ ನಂಬರ್ ಗೆ ಬಂಪರ್ ಬಹುಮಾನ ಲಭಿಸಿದೆ. ಇದೀಗ ಕೆನರಾ ಬ್ಯಾಂಕಿನ ಕೊಚ್ಚಿ ಶಾಖೆಗೆ ಟಿಕೆಟ್ ಸಲ್ಲಿಕೆ ಮಾಡಲಾಗಿದೆ ಎಂದಿದ್ದಾರೆ.
ಇದೀಗ ಜಯಪಾಲನ್ ಅವರಿಗೆ ತೆರಿಗೆ ಕಡಿತಗೊಂಡು 7.56 ಕೋಟಿ ರೂ. ಹಣ ದೊರೆಯಲಿದೆ. ಓಣಂ ಹಬ್ಬದ ಈ ಬಂಪರ್ ಲಾಟರಿಯ 54 ಲಕ್ಷ ಟಿಕೆಟ್ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.