ಮಂಗಳೂರು-- ಈತ ಧರಿಸಿದ್ದ ಬಟ್ಟೆಯಲ್ಲಿತ್ತು 14.69 ಲಕ್ಷದ ಬಂಗಾರ!
Tuesday, September 28, 2021
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ
ಸಾಗಿಸುತ್ತಿದ್ದ ಬಂಗಾರವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದ ಕಾಸರಗೋಡುವಿನ ಪುಷರ ಪ್ರಯಾಣಿಕ ಸೋಮವಾರ ಶಾರ್ಜಾದಿಂದ ಮಂಗಳುರಿಗೆ
ಇಂಡಿಗೋ ವಿಮಾನದಲ್ಲಿ ಬಂದಿದ್ದ. ಈತನನ್ನು ತಪಾಸಣೆ ನಡೆಸುವ ವೇಳೆ ಈತನ ಶರ್ಟನ್ನು ಅನುಮಾನದ ಮೇಲೆ
ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಚಾಕಲೆಟ್ ಬಣ್ಣದ ಈತನ ಶರ್ಟ್ ನಲ್ಲಿ ಚಿ್ನ್ನವನ್ನು ಪೌಡರ್
ರೂಪದಲ್ಲಿ ಅಡಗಿಸಿಡಲಾಗಿತ್ತು. ಇದನ್ನು ಪರಿಶೀಲಿಸಿದಾಗ 24 ಕ್ಯಾರೆಟ್ ಮೌಲ್ಯದ 310 ಗ್ರಾಂ ಚಿನ್ನ
ಸಿಕ್ಕಿದೆ. ಇದರ ಮೌಲ್ಯ ರೂ 14.69 ಲಕ್ಷ ಎಂದು ಅಂದಾಜಿಸಲಾಗಿದೆ.
ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ
ಮುಂದುವರಿಸಿದ್ದಾರೆ.