15 ವರ್ಷದ ಬಾಲಕಿ ಮೇಲೆ 8 ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ ಬೆಳಕಿಗೆ- ಇಬ್ಬರು ಅಪ್ರಾಪ್ತರು ಸೇರಿ 26 ಮಂದಿ ಅರೆಸ್ಟ್
ಮುಂಬಯಿ: ಮುಂಬಯಿನ ಡೊಂಬಿವಲಿಯಲ್ಲಿ 15 ವರ್ಷದ ಬಾಲಕಿಯನ್ನು
ಎಂಟು ತಿಂಗಳಿನಿಂದ ಅತ್ಯಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ,ಪ್ರಕರಣಕ್ಕೆ
ಸಂಬಂಧಿಸಿದಂತೆ 26 ಆರೋಪಿಗಳನ್ನು ಮಹಾರಾಷ್ಟ್ರ ಥಾಣೆ ಪೊಲೀಸರು ಬಂಧಿಸಿದ್ದಾರೆ
15 ವರ್ಷದ
ಬಾಲಕಿ
ಮೇಲೆ ಕಳೆದ ಎಂಟು ತಿಂಗಳಿನಿಂದ ಮುಂಬಯಿನ ವಿವಿಧ ಸ್ಥಳಗಳಲ್ಲಿ ಹಲವು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದೀಗ ಬಾಲಕಿಯು ದೂರು ನೀಡಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಸುತ್ತಿದ್ದಾರೆ.
ಪೊಲೀಸರು ಬುಧವಾರ
ರಾತ್ರಿ 33 ಆರೋಪಿಗಳ ವಿರುದ್ಧ ಪುನರಾವರ್ತಿತ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಹದಿನಾರು ವರ್ಷ ದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ
ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ದತ್ತಾತ್ರಯ್ ಕರಾಳೆ ಅವರು, ಈ ವರ್ಷದ ಜ.
29 ರಿಂದ
ಸೆ. 22ರ ನಡುವೆ ಈ
ಘಟನೆ ನಡೆದಿದ್ದು ಬಾಲಕಿಯ
ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ಎಸಗಿದ ವೀಡಿಯೋವನ್ನು ರೆಕಾರ್ಡ್ ಮಾಡಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ . ಬಳಿಕ ಆತನ ಸ್ನೇಹಿತರು ಮತ್ತು ಪರಿಚಯಸ್ಥರು ಜಿಲ್ಲೆಯ ಡೊಂಬಿವಿಲಿ, ಬದ್ಲಾಪುರ, ಮುರ್ದಾಬಾದ್ ಮತ್ತು ರಬಾನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಕನಿಷ್ಟ ನಾಲ್ಕರಿಂದ ಐದು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಈ ಪ್ರಕರಣಕ್ಕೆ ವನ್ನು ತನಿಖೆ ನಡೆಸಲು ಎಸಿಪಿ ಸೋನಾಲಿ ಧೋಲೆ ಅವರ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ ಎಂದಿದ್ದಾರೆ
ಬಾಲಕಿ
33 ವ್ಯಕ್ತಿಗಳ ಹೆಸರನ್ನು ತಿಳಿಸಿದ್ದು ಇದರಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಸೇರಿದಂತೆ 26 ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ
ಎಂದು ತಿಳಿಸಿದ್ದಾರೆ