ಟೊಯೊಟಾ ಸಂಸ್ಥೆಯಿಂದ ಮಿನಿ ಇಲೆಕ್ಟ್ರಿಕ್ ಸಿ+ಪಾಡ್ ಕಾರು ಬಿಡುಗಡೆ: ಸಂಪೂರ್ಣ ಚಾರ್ಜ್ ಗೆ 150 ಕಿ.ಮೀ.ವರೆಗೆ ಚಾಲನೆ
Tuesday, September 14, 2021
ನವದೆಹಲಿ: ಜಪಾನ್ ನ ಪ್ರಸಿದ್ಧ ಕಾರು ತಯಾರಕ ಸಂಸ್ಥೆ ಟೊಯೋಟಾ ಮೋಟಾರ್ ಕಾರ್ಪೊರೇಶನ್ ಇಬ್ಬರು ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ಮಿನಿ ಇಲೆಕ್ಟ್ರಿಕ್ ಕಾರು ಸಿ+ಪಾಡ್ (C + POD) ಅನ್ನು ಪರಿಚಯಿಸಿದೆ. ಈ ಕಾರನ್ನು ಸ್ಪೆಷಲ್ ಎಡಿಷನ್ ನಡಿಯಲ್ಲಿ ಬಿಡುಗಡೆ ಮಾಡಿದೆ.
ಗಾತ್ರದಲ್ಲಿ ಬಹಳ ಸಣ್ಣದಾಗುರುವ ಈ ಕಾರಿನ ಒಟ್ಟು ತೂಕ ಕೇವಲ 690 ಕೆ.ಜಿ. ಮಾತ್ರ. ಇದರ ಉದ್ದ 2,490 ಮಿ.ಮೀ. ಇದ್ದು, ಅಗಲ 1,290 ಮಿ.ಮೀ. ಹಾಗೂ ಎತ್ತರ 1,550 ಮಿ.ಮೀ. ಇದೆ. ಕೇವಲ ಇಬ್ಬರು ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುವ ಆಸನದ ವ್ಯವಸ್ಥೆ ಇದರಲ್ಲಿದೆ. ಅದರೆ ಈ ಕಾರಿನ ಹಿಂಬದಿಯಲ್ಲಿ ಲಗೇಜ್ ಸ್ಪೇಸ್ ನೀಡಲಾಗಿರುವುದು ವಿಶೇಷವಾಗಿದೆ.
C + POD ಕಾರು 9.06 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು ಗರಿಷ್ಠ 12 ಎಚ್ ಪಿ ಪವರ್ ಮತ್ತು 56 ಎನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಆದ್ದರಿಂದ ಈ ಕಾರನ್ನು 60 ಕಿಲೋಮೀಟರ್ ವೇಗದಲ್ಲಿ ಓಡಿಸಬಹುದು.
ಇದರ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ 100V/6A ಗುಣಮಟ್ಟದ ವಿದ್ಯುತ್ ಪೂರೈಕೆಯ ಸಹಾಯದಿಂದ ಸಂಪೂರ್ಣ ಚಾರ್ಜ್ ಆಗಲು 16 ಗಂಟೆ ತೆಗೆದುಕೊಳ್ಳುತ್ತದೆ. ಈ ಕಾರನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿಕೊಂಡಲ್ಲಿ 150 ಕಿ.ಮೀ.ವರೆಗೆ ಚಲಿಸಬಹುದು. ಆದ್ದರಿಂದ ದೂರದ ಪ್ರಯಾಣಗಳಿಗೂ ಈ ಕಾರನ್ನು ಆರಾಮವಾಗಿ ಬಳಸಿಕೊಳ್ಳಬಹುದು.
ಸದ್ಯ C + POD ಕಾರಲ್ಲಿ ಎಕ್ಸ್ ವೇರಿಯಂಟ್ ಹಾಗೂ ಜಿ ವೇರಿಯಂಟ್ ಎಂಬ ಎರಡು ಮಾಡೆಲ್ಗಳು ಬಿಡುಗಡೆ ಆಗಿದೆ. ಎಕ್ಸ್ ವೇರಿಯಂಟ್ ನ ಬೆಲೆ 1.65 ಮಿಲಿಯನ್ ಯೆನ ( ಭಾರತೀಯ ಕರೆನ್ಸಿಯ ಮೌಲ್ಯ 11.75 ಲಕ್ಷ ರೂ.) ಆಗಿದೆ. ಅದೇ ರೀತಿ ಜಿವೇರಿಯಂಟ್ ಬೆಲೆ 1.71 ಮಿಲಿಯನ್ ಯೆನ್ (ಭಾರತೀಯ ಮೌಲ್ಯ 12.15 ಲಕ್ಷ ರೂ.) ಆಗಿದೆ.