-->
ಗೆಳೆಯನ 16 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ- ಪ್ರಕರಣ ದಾಖಲು

ಗೆಳೆಯನ 16 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ- ಪ್ರಕರಣ ದಾಖಲು

 



 

ಹುಬ್ಬಳ್ಳಿ: ಸ್ನೇಹಿತನ ಮಕ್ಕಳನ್ನು ತನ್ನ ಮಕ್ಕಳಂತೆ ನೋಡುವವರೆ ಜಾಸ್ತಿ. ಇಂತಹದರಲ್ಲಿ ಕಾಮುಕನೊಬ್ಬ ತನ್ನ ಸ್ನೇಹಿತನ 16 ವರ್ಷದ ಮಗಳ  ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

 

ಹುಬ್ಬಳ್ಳಿಯ ಗೋಕುಲ ಠಾಣೆ ವ್ಯಾಪ್ತಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. 16 ವರ್ಷದ ಬಾಲಕಿಯ ತಂದೆಯೊಂದಿಗೆ ಕೆಲಸ ಮಾಡುತ್ತಿದ್ದ ಗೆಳೆಯನೆ  ಈ ಕೃತ್ಯ ಎಸಗಿದ್ದಾನೆ. ಮಾರುತಿನಗರ ನಿವಾಸಿ ಕೇಶವ ಎಂಬಾತ ಈ ಕೃತ್ಯವೆಸಗಿದಾತ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

 

ಈ ಬಾಲಕಿ ಇತ್ತೀಚೆಗೆ ಔಷಧಿ ಮತ್ತು ತರಕಾರಿ ತರಲು ಹೋಗಿದ್ದ ವೇಳೆ ಕೇಶವ ಆಕೆಯನ್ನು ತನ್ನ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆತ ಈಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಈಕೃತ್ಯಕ್ಕೆ ಮತ್ತೋರ್ವ ಸಾಥ್ ನೀಡಿದ್ದಾನೆ ಎಂದು ತಿಳಿದುಬಂದಿದ್ದು ಪ್ರಕರಣ ದಾಖಲಾಗಿದೆ

Ads on article

Advertise in articles 1

advertising articles 2

Advertise under the article