-->
ಬೆಂಗಳೂರಿನಲ್ಲಿ ಮತ್ತೊಂದು ಮೂರಂತಸ್ತಿನ ಕಟ್ಟಡ ಭಾಗಶಃ ಕುಸಿತ- ಬಚಾವಾದ 18 ಕುಟುಂಬ

ಬೆಂಗಳೂರಿನಲ್ಲಿ ಮತ್ತೊಂದು ಮೂರಂತಸ್ತಿನ ಕಟ್ಟಡ ಭಾಗಶಃ ಕುಸಿತ- ಬಚಾವಾದ 18 ಕುಟುಂಬ

 



 


ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆಯಷ್ಟೆ ಕಟ್ಟಡವೊಂದು ಕುಸಿತಕ್ಕೊಳಗಾದ ಘಟನೆ ನಡೆದಿರುವ ಬೆನ್ನಿಗೆ ಮತ್ತೊಂದು ಕಟ್ಟಡ ಕುಸಿತದ ಘಟನೆ ನಡೆದಿದೆ

ಬೆಂಗಳೂರಿನ ಡೈರಿ ವೃತ್ತ ಬಳಿಯ ಕೆಎಂಎಫ್​ ಕ್ವಾಟ್ರಸ್ ನಲ್ಲಿರುವ 3 ಅಂತಸ್ತಿನ ಕಟ್ಟಡ ಭಾಗಶಃ ಕುಸಿದಿದೆ. ಕಟ್ಟಡ ಕುಸಿತದಿಂದ ಯಾವುದೇ ಪ್ರಾಣಪಾಯ  ಸಂಭವಿಸಿಲ್ಲ .

ಇದು  ಹಳೆಯ ಕ್ವಾಟ್ರಸ್ ಆಗಿದ್ದು  ಇದರಲ್ಲಿ  18 ಮನೆಗಳಿದೆ. ಈ ಕಟ್ಟಡ ಕುಸಿಯುವ ಬಗ್ಗೆ ಮುನ್ಸೂಚನೆ ಇದ್ದದ್ದರಿಂದ  ಕಟ್ಟಡ ಕುಸಿಯುವ ಬಗ್ಗೆ ಇಂದು ಬೆಳಿಗ್ಗೆ ಇಂಜಿನಿಯರ್ ಗೆ ಮಾಹಿತಿ ನೀಡಿ ಮನೆಯಲ್ಲಿದ್ದವರೆಲ್ಲ ಹೊರಗೆ ಬಂದಿದ್ದರು.

 

ಎಲ್ಲರೂ ಮನೆಯಿಂದ  ಹೊರಬಂದ  5  ನಿಮಿಷದಲ್ಲಿ ಕಟ್ಟಡ ಕುಸಿದಿದೆ. ಮನೆಯವರು ಬಳಸುತ್ತಿದ್ದ ಸಾಮಾಗ್ರಿಗಳು ಕುಸಿದ ಕಟ್ಟಡದೊಳಗೆ ಇದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

ಇದನ್ನು ಓದಿ: VIDEO:ಬೆಂಗಳೂರಿನಲ್ಲಿ ನೋಡನೊಡುತ್ತಿದ್ದಂತೆ ಕುಸಿದು ಬಿತ್ತು 3 ಅಂತಸ್ತಿನ ಕಟ್ಟಡ!

Ads on article

Advertise in articles 1

advertising articles 2

Advertise under the article