-->
ಕ್ರಿಪ್ಟೋಕರೆನ್ಸಿ ಮೂಲಕ ತಿಂಗಳಿಗೆ 22 ಲಕ್ಷ ರೂ. ಹಣ ಗಳಿಸುವ ಪುಟ್ಟ ಪೋರ-ಪೋರಿ ಜೋಡಿ

ಕ್ರಿಪ್ಟೋಕರೆನ್ಸಿ ಮೂಲಕ ತಿಂಗಳಿಗೆ 22 ಲಕ್ಷ ರೂ. ಹಣ ಗಳಿಸುವ ಪುಟ್ಟ ಪೋರ-ಪೋರಿ ಜೋಡಿ

ವಾಷಿಂಗ್ಟನ್‌: ಭಾರತೀಯರಿನ್ನೂ ನಿಲುಕದ ಕ್ರಿಪ್ಟೋಕರೆನ್ಸಿಯನ್ನು ಕರಗತ ಮಾಡಿಕೊಂಡಿರುವ ಭಾರತೀಯ-ಅಮೆರಿಕನ್‌ ಸಹೋದರ-ಸಹೋದರಿ ಜೋಡಿಯೊಂದು ಕ್ರಿಪ್ಟೋಕರೆನ್ಸಿ ಮೈನಿಂಗ್‌ ಮಾಡಿ ಲಕ್ಷಾಂತರ ರೂ. ಸಂಪಾದನೆ ಮಾಡಲಾರಂಭಿಸಿದ್ದಾರೆ.

ಅಮೆರಿಕಾ ವಾಸಿಗಳಾಗಿರುವ ಇಶಾನ್‌ (14) ಮತ್ತು ಆನ್ಯಾ (9) ಈ ಸಾಧನೆ ಮಾಡಿರುವ ಅಣ್ಣ-ತಂಗಿ ಜೋಡಿ.

ಕಳೆದ ಫೆಬ್ರವರಿಯಲ್ಲಿ ಕ್ರಿಪ್ಟೋಕರೆನ್ಸಿ ಬೆಲೆ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಇಶಾನ್‌ ಗೆ ತನಗೂ ಅದನ್ನು ಖರೀದಿಸುವ ಮನಸಾಗಿದೆ. ಆದರೆ ಖರೀದಿ ಮಾಡಲು ಅಷ್ಟೊಂದು ಪ್ರಮಾಣದ ಹಣವಿಲ್ಲದ ಕಾರಣ ಆತ ಅದರ ಮೈನಿಂಗ್‌ ಕೆಲಸ ಆರಂಭಿಸಿದ್ದಾನೆ. ಈ ಕಾರ್ಯಕ್ಕೆ ಆತನ ತಂಗಿ ಆನ್ಯಾಳೂ ಕೈ ಜೋಡಿಸಿದ್ದಾಳೆ. ಮನೆಯಲ್ಲಿದ್ದ ಗೇಮಿಂಗ್‌ ಕಂಪ್ಯೂಟರ್‌ ನಲ್ಲಿಯೇ ಮೈನಿಂಗ್‌ ಕಂಪ್ಯೂಟರ್‌ ಮಾಡಿಕೊಳ್ಳಲಾಗಿದೆ.

ದಿನಕ್ಕೆ 3 ಡಾಲರ್‌ ದುಡಿಮೆ ಯೊಂದಿಗೆ ಈ ಅಣ್ಣ ತಂಗಿ ಜೋಡಿಯ ಮೈನಿಂಗ್ ಕಾರ್ಯ ಆರಂಭವಾಗಿದ್ದು, ಇದೀಗ ತಿಂಗಳಿಗೆ 22 ಲಕ್ಷ ರೂ. ದುಡಿಯುವ ಮಟ್ಟಿಗೆ ಬೆಳೆದಿದೆ. ಯೂಟ್ಯೂಬ್‌ ನೋಡಿ, ಲೇಖನಗಳನ್ನು ಓದಿ ಈ ತಂತ್ರ ಜ್ಞಾನವನ್ನು ಕಲಿತಿರುವುದಾಗಿ ಈ ಜೋಡಿ ಹೇಳಿಕೊಂಡಿದೆ.

Ads on article

Advertise in articles 1

advertising articles 2

Advertise under the article