ಮಂಗಳೂರಿನ ಯುವತಿ ನಾಪತ್ತೆಗೆ ಟ್ವಿಸ್ಟ್- ಮುಸ್ಲಿಂ ಕುಟುಂಬದ 22 ವರ್ಷಗಳ ಹಿಂದಿನ ಸೇಡು- ಮತಾಂತರವಾಗಿದ್ದ ಮಗಳಿಗೆ ಆಕೆಯ ಮಗಳ ಮೂಲಕ ಶಾಕ್ ನೀಡಿದ ಕುಟುಂಬ
Thursday, September 9, 2021
ಮಂಗಳೂರು; 22 ವರ್ಷಗಳ ಹಿಂದೆ ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಮಹಿಳೆಗೆ ಆಕೆಯ ಕುಟುಂಬಿಕರು ಮಗಳ ಮೂಲಕ ಶಾಕ್ ನೀಡಿದ ಘಟನೆ ನಡೆದಿದೆ.
ಇತ್ತೀಚೆಗೆ ಮಂಗಳೂರಿನ 21 ವರ್ಷದ ಯುವತಿ ರೇಶ್ಮಾ ನಿಶ್ಚಿತಾರ್ಥ ವಾದ ಬಳಿಕ ಯುವಕನ ಕಡೆಯವರು ನೀಡಿದ ಚಿನ್ನಾಭರಣದೊಂದಿಗೆ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು.ಜೊತೆಗೆ ಆಕೆ ತಂದೆಯ ಬ್ಯಾಂಕ್ ನಲ್ಲಿದ್ದ 90 ಸಾವಿರ ಹಣವನ್ನು ಯುವಕನೊಬ್ಬನ ಖಾತೆಗೆ ಟ್ರಾನ್ಸ್ ಫರ್ ಮಾಡಿ ನಾಪತ್ತೆಯಾಗಿದ್ದಳು. ಇದು ಲವ್ ಜೆಹಾದ್ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿತ್ತು.
ಈ ಪ್ರಕರಣ ಕೆದಕಿ ಹೋದಾಗ 22 ವರ್ಷಗಳ ಹಿಂದಿನ ಪ್ರತಿಕಾರ ತೀರಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಇದೀಗ ನಾಪತ್ತೆಯಾಗಿರುವ ರೇಶ್ಮಾ (21) ಎಂಬವಳ ತಾಯಿ ಯಶೋಧ ಮೂಲತಃ ಮುಸ್ಲಿಂ ಕುಟುಂಬದಿಂದ ಬಂದವಳು. ಆಗ ಮುಸ್ಲಿಂ ಆಗಿದ್ದ ಯಶೋಧ 22 ವರ್ಷಗಳ ಹಿಂದೆ ಹಿಂದೂ ಯುವಕನನ್ನು ಮದುವೆಯಾಗಿದ್ದಳು. ಬಳಿಕ ತನ್ನ ಹೆಸರನ್ನು ಯಶೋಧ ಎಂದು ಬದಲಾಯಿಸಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಳು. ಇದು ಆಕೆಯ ಕುಟುಂಬಕ್ಕೆ ಅಘಾತ ಉಂಟು ಮಾಡಿತ್ತು. ಮಗಳು ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಈ ಕುಟುಂಬ ಕಾಯುತ್ತಿತ್ತು. ಮಗಳ ಮಗಳು 21 ವರ್ಷವಾಗುವವರೆಗೆ ಕಾದ ಅವರು ಆಕೆಗೆ ನಿಶ್ಚಿತಾರ್ಥ ವಾದ ಕೂಡಲೇ ಮೊದಲೇ ನಿಶ್ಚಯಿಸಿದಂತೆ ಆಕೆಯನ್ನು ಗದಗ ಜಿಲ್ಲೆಗೆ ಕರೆಸಿ ಯಶೋಧನ ಅಕ್ಕನ ಮಗನಿಗೆ ಮದುವೆ ಮಾಡಿದ್ದಾರೆ. ಈ ಮೂಲಕ ಮಗಳು ಅನ್ಯಧರ್ಮ ಸೇರಿ ಮಾಡಿದ್ದ ಅವಮಾನಕ್ಕೆ ಆಕೆಯ ಕುಟುಂಬ ಪ್ರತಿಕಾರ ತೀರಿಸಿದೆ.