ಬಂಟ್ವಾಳದ ಕಕ್ಯೆಪದವಿನಲ್ಲಿ 26 ವರ್ಷದ ಯುವಕನ ಕೊಲೆ
Monday, September 13, 2021
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಯೆಪದವು ಕೊಡ್ಯಮಲೆ ಗುಡ್ಡೆ ಎಂಬಲ್ಲಿ
ಯುವಕನೋರ್ವನನ್ನು ತಲೆಗೆ ಹೊಡೆದು ಕೊಲೆಗೈದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ರಫೀಕ್ (26) ಕೊಲೆಯಾದ ವ್ಯಕ್ತಿ. ರಫೀಕ್ ಅವರ ಸಂಬಂಧಿಕ ಕೊಲೆ ಮಾಡಿದವನು ಎಂದು ಹೇಳಲಾಗುತ್ತಿದೆ
ರಫೀಕ್ ಮೃತದೇಹ ಬಂಟ್ವಾಳ ತಾಲೂಕಿನ ಕೋಡ್ಯಮಲೆಯ ರಸ್ತೆ ಬದಿ ಪತ್ತೆಯಾಗಿದ್ದು ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮರದ ತುಂಡಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದ್ದು ಕ್ಷುಲ್ಲಕ ಕಾರಣಕ್ಕೆ ಈ ಕೊಲೆ ಆಗಿದೆ ಎಂದು ಹೇಳಲಾಗಿದೆ. ಸ್ಥಳದಿಂದ ಕೊಲೆ ಆರೋಪಿ ಪರಾರಿಯಾಗಿದ್ದಾನೆ.